ಭಾರತದಲ್ಲಿ ಹೊಸ ಆರೋಗ್ಯ ಸಮಸ್ಯೆ ತೆರೆದುಕೊಳ್ಳುತ್ತಿದೆ. ಕಾರ್ಪೊರೇಟ್‌ಗಳಲ್ಲಿ ಕೆಲಸ ಮಾಡುವ ಸುಮಾರು 60 ಪ್ರತಿಶತ ಪುರುಷರು ವಿಟಮಿನ್ ಬಿ 12 ಕೊರತೆಯನ್ನು ಹೊಂದಿದ್ದಾರೆ ಎಂದು ಹೊಸ ಅಧ್ಯಯನ ಒಂದು ಬಹಿರಂಗಪಡಿಸಿದೆ. ಈ ವಿಟಮಿನ್ ಬಿ 12 ಎಂಬುದು ದೇಹ ಕೆಂಪು ರಕ್ತ ಕಣಗಳು ಮತ್ತು ಡಿಎನ್‌ಎ ಹಾಗೂ ಎಲ್ಲಾ ಜೀವಕೋಶಗಳಲ್ಲಿನ ಆನುವಂಶಿಕ ವಸ್ತುವನ್ನು ತಯಾರಿಸಲು ಸಹಾಯ ಮಾಡುವ ಪ್ರಮುಖ ಪೋಷಕಾಂಶವಾಗಿದೆ.
ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಮೆಡಿಬಡ್ಡಿ ನಡೆಸಿದ ಸಂಶೋಧನೆ ಕಾರ್ಪೊರೇಟ್ ಕಂಪನಿಗಳಲ್ಲಿ ಕನಿಷ್ಠ 57 ಪ್ರತಿಶತ ಪುರುಷರಲ್ಲಿ ವಿಟಮಿನ್ ಕೊರತೆಯನ್ನು ಸೂಚಿಸುತ್ತದೆ. ಇದನ್ನು ಕೋಬಾಲಾಮಿನ್ ಎಂದೂ ಕರೆಯುತ್ತಾರೆ.ಇದು ಪುರುಷರ ನರ ಕೋಶಗಳು ಮತ್ತು ರಕ್ತ ಕಣಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ತಜ್ಞರು ಹೇಳುವಂತೆ ನಮ್ಮ ದೇಹ ವಿಟಮಿನ್ ಬಿ 12 ಅನ್ನು ತಾನಾಗಿಯೇ ತಯಾರಿಸುವುದಿಲ್ಲ. ಅದೇನಿದ್ದರೂ ಮಾಂಸ, ಡೈರಿ ಮತ್ತು ಮೊಟ್ಟೆಗಳಂತಹ ವಿಟಮಿನ್ ಬಿ 12 ಹೊಂದಿರುವ ಆಹಾರ ಮತ್ತು ಪಾನೀಯಗಳ ಮೂಲಕ ಹೀರಿಕೊಳ್ಳುತ್ತದೆ. ಕೆಲವು ಧಾನ್ಯಗಳು, ಬ್ರೆಡ್ ಮತ್ತು ಪೌಷ್ಟಿಕಾಂಶದ ಈಸ್ಟ್‌ನಂತಹ ಆಹಾರಗಳಲ್ಲಿಯೂ ಇದನ್ನು ಕಾಣಬಹುದು.