ಮೇ 10 ರಂದು ಘೋಷಣೆಯಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಾರಿ ಹೈದರಾಬಾದ್‍ನಿಂದ ಇದುವರೆಗೂ ಒಮ್ಮೆಯೂ ಬಳಸದ ಮತಯಂತ್ರಗಳು ಬಂದಿಳಿಯಲಿವೆ. ಚುನಾವಣಾ ಆಯೋಗ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ಗುಜರಾತ್ ಚುನಾವಣೆಯಲ್ಲಿ ಬಳಸಿದ ಮತಯಂತ್ರಗಳು ದೋಷಪೂರಿತವಾಗಿದೆ ಮತ್ತು ಏಕಪಕ್ಷೀಯ ಟ್ಯಾಂಪರ್ ಮಾಡಲ್ಪಟ್ಟಿದೆ ಎಂಬ ಆರೋಪ ಕೇಳಿಬಂದಿತ್ತು. ಗುಜರಾತ್ ಚುನಾವಣೆಯ ಬಳಿಕ ಹಾರ್ದಿಕ್ ಪಟೇಲ್ ಮತ್ತಿತರ ನಾಯಕರು ಇವಿಎಂ ಯಂತ್ರಗಳು ಹ್ಯಾಕ್ ಆಗಿವೆ ಎಂದು ಆರೋಪಿಸಿದ್ದರು. ಹೀಗಾಗಿ ಗುಜರಾತ್ ಚುನಾವಣೆಯಲ್ಲಿ ಬಳಸಲ್ಪಟ್ಟ ಯಂತ್ರಗಳನ್ನು ಕರ್ನಾಟಕ ಚುನಾವಣೆಗೆ ಬಳಸಲು ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಒಮ್ಮೆಯೂ ಬಳಸದ ಹೊಚ್ಚಹೊಸ ಯಂತ್ರಗಳನ್ನು ಹೈದರಾಬಾದ್ ನಿಂದ ತರಿಸುತ್ತಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಚುನಾವಣಾ ಆಯುಕ್ತರ ಈ ಕ್ರಮವನ್ನು ಸ್ವಾಗತಿಸಿರುವ ಕಾಂಗ್ರೆಸ್ ಧುರೀಣ ಡಿ.ಕೆ.ಶಿವಕುಮಾರ್, ಆಯೊಗಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.