2026ರಲ್ಲಿ ನಡೆಯಲಿರುವ ಪ್ರತಿಷ್ಠಿತ ಬ್ಯಾಡ್ಮಿಂಟನ್ (Badminton) ವಿಶ್ವ ಚಾಂಪಿಯನ್‌ಶಿಪ್‌ಗೆ ಈ ಬಾರಿ ಭಾರತ (India) ಆತಿಥ್ಯ ವಹಿಸಲಿದ್ದು, ನವದೆಹಲಿಯಲ್ಲಿ (Delhi) ಪಂದ್ಯಾಟಗಳು ನಡೆಯಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (BWF) ಪ್ರಕಟಿಸಿದೆ.
ಭಾರತದಲ್ಲಿ ಸುಮಾರು 17 ವರ್ಷದ ಬಳಿಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲಿದ್ದು, ಈ ಹಿಂದೆ 2009 ರಲ್ಲಿ ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಇದಾದ ಬಳಿಕ ಯಾವುದೇ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿ ನಡೆದಿರಲಿಲ್ಲ.
ಈ ಬಗ್ಗೆ ಕ್ರೀಡೆಯ ಜಾಗತಿಕ ಆಡಳಿತ ಮಂಡಳಿ, ಬಿಡಬ್ಲ್ಯೂಎಫ್ ಸೋಮವಾರ ಪ್ಯಾರಿಸ್‌ನಲ್ಲಿ ನಡೆದ 2025 ಚಾಂಪಿಯನ್‌ಶಿಪ್‌ಗಳ ಸಮಾರೋಪ ಸಮಾರಂಭದಲ್ಲಿ ಬಿಡಬ್ಲ್ಯೂಎಫ್ ಅಧ್ಯಕ್ಷ ಖುನ್ಶಿಂಗ್ ಪತಾಮಾ ಲೀಸ್ವಡ್ರಾಕುಲ್, ಫೆಡರೇಶನ್ ಫ್ರಾಂಕ್ಸೆಸ್ ಡಿ ಬ್ಯಾಡ್ಮಿಂಟನ್‌ನ ಮುಖ್ಯಸ್ಥ ಫ್ರಾಂಕ್ ಲಾರೆಂಟ್ ಅವರು ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಅವರಿಗೆ ಆತಿಥ್ಯ ನೀಡಿದರು.
ಈ ಬಗ್ಗೆ ಸಂಜಯ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಪ್ಯಾರಿಸ್ ಪ್ರದರ್ಶಿಸಿದ ಶ್ರೇಷ್ಠತೆ ಮತ್ತು ಭವ್ಯತೆಯ ಅದೇ ಮಾನದಂಡಗಳನ್ನು ಎತ್ತಿಹಿಡಿಯಲು ಮತ್ತು ಮುಂದುವರಿಸಲು ಭಾರತವು ಎದುರು ನೋಡುತ್ತಿದೆ. ಈ ಟೂರ್ನಿಯನ್ನು ಉತ್ತಮವಾಗಿ ನಡೆಸುತ್ತೇವೆ ಎಂದು ನಾವು ಭರವಸೆ ನೀಡುತ್ತೇವೆ. ಹಾಗೆ ಬ್ಯಾಡ್ಮಿಂಟನ್ ಕುಟುಂಬವನ್ನು ದೆಹಲಿಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ದೆಹಲಿಯಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ನಡೆಯುವ ಮೂಲಕ 8 ವರ್ಷಗಳ ನಂತರ ಟೂರ್ನಿಯು ಏಷ್ಯಾಗೆ ಮರಳಿ ಬರಲಿದೆ. ಈ ಹಿಂದೆ 2018 ರಲ್ಲಿ ಚೀನಾದ ನಾನ್ ಜಿಂಗ್ ನಲ್ಲಿ ಕೊನೆಯ ಬಾರಿ ಬ್ಯಾಡ್ಮಿಂಟನ್ ಟೂರ್ನಿ ನಡೆದಿತ್ತು.
ಇದನ್ನೂ ಓದಿ : ಮಹಾಕಾಳಿಗೆ ಹರಕೆ ಸಲ್ಲಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು
2011ರಿಂದಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕವನ್ನು ಗೆಲ್ಲುತ್ತಾ ಬಂದಿದೆ. ಈ ವರ್ಷ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
ಇನ್ನು 2019ರಲ್ಲಿ ಪಿ.ವಿ. ಸಿಂಧು ಭಾರತಕ್ಕೆ ಮೊತ್ತ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಸೈನಾ 2015ರಲ್ಲಿ ಬೆಳ್ಳಿ ಹಾಗೂ 2017ರಲ್ಲಿ ಕಂಚು ಜಯಿಸಿದ್ದರು. ಈ ಬಾರಿ ಭಾರತದಲ್ಲೇ ಟೂರ್ನಿಯನ್ನು ನಡೆಯಲಿದ್ದು, ಪದಕ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
2025 ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಕ್ವಾರ್ಟರ್ ಫೈನಲ್ ತಲುಪಿ -ಸೆಮಿಸ್‌ನಲ್ಲಿ ಸೋತ ನಂತರ ಕಂಚಿನ ಪದಕ ಗೆದ್ದಿದ್ದರು.