ಪ್ರಯಾಗರಾಜ್ : ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದು, ಜನರನ್ನು ನಿಯಂತ್ರಿಸಲು, ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಉತ್ತರ ಪ್ರದೇಶ ಸರ್ಕಾರ ನಾನಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿದೆ.
ಈ ಪೈಕಿ ಹೊಸ ವ್ಯವಸ್ಥೆಯೊಂದು ಜನರ ಗಮನ ಸೆಳೆದಿದ್ದು, 1 ಕಿಮೀ ವ್ಯಾಪ್ತಿಯೊಳಗೆ ಪಾರ್ಕಿಂಗ್, ಫುಡ್ ಕೋರ್ಟ್‌ಗಳು ಮತ್ತು ಆಸ್ಪತ್ರೆಗಳಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡಲು AI ಚಾಟ್‌ಬಾಟ್ ಒಂದು ಆಕ್ಟಿವ್ ಆಗಿದೆ.ಮಹಾಕುಂಭದ ನಿಖರವಾದ ಮ್ಯಾಪಿಂಗ್‌ನೊಂದಿಗೆ ಪ್ರತಿ ವಲಯದ ಪ್ರದೇಶವನ್ನು ವಿವರಿಸಲು AI ಚಾಟ್‌ಬಾಟ್ ನಿಯೋಜನೆಗೊಂಡಿದ್ದು ಸಂಕ್ಷಿಪ್ತ ಮಾಹಿತಿಯುಳ್ಳ PDF ಗಳನ್ನು Google ನಲ್ಲಿ ಹಂಚಿಕೊಳ್ಳಾಗಿದೆ.
ಶೌಚಾಲಯಗಳು, ಪ್ರದರ್ಶನಗಳು,ಬ್ಯಾಂಕಿಂಗ್, ಸಾರ್ವಜನಿಕ ನೀರಿನ ವ್ಯವಸ್ಥೆ, ಎಟಿಎಂಗಳು, ಈವೆಂಟ್‌ಗಳು, ಆಕರ್ಷಣೆಗಳು ಮತ್ತು ಸಾರಿಗೆ ಮಾಹಿತಿಗಾಗಿ ಜನರು ಅಲೆದಾಡಬೇಕಾಗಿಲ್ಲ. ಜಸ್ಟ್ QR ಕೋಡ್ ಸ್ಕ್ಯಾನ್ ಮಾಡಿ ಸಂಪೂರ್ಣ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಬಹುದಾದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.