ಶೀಘ್ರದಲ್ಲೇ ನೇಪಾಳದಿಂದ ವಿದ್ಯುತ್ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಭಾರತ ಸಹಿ ಹಾಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ದೆಹಲಿ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಉಭಯ ರಾಷ್ಟ್ರಗಳ ಅಂಕಿತ ಬೀಳಲಿದೆ ಎನ್ನಲಾಗಿದೆ.
ನೇಪಾಳದ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಕುರಿತು ಭಾರತದೊಂದಿಗೆ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲು ನೇಪಾಳ ಪ್ರಧಾನಿ ಉತ್ಸುಕರಾಗಿದ್ದಾರೆ.
ದಹಲ್ ಪ್ರಚಂಡ ಅವರ ಭಾರತ ಭೇಟಿಯ ಬಗ್ಗೆ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಏಪ್ರಿಲ್ ಎರಡನೇ ವಾರದ ನಂತರ ಅವರು ನವದೆಹಲಿಗೆ ಬರುವ ಸಾಧ್ಯತೆಯಿದೆ ಎಂದು ನೇಪಾಳಿ ಸರ್ಕಾರಿ ಮೂಲಗಳು ಹೇಳಿವೆ.