ಮುಂಬೈನ ಬೆಸ್ಟ್ ಸಾರಿಗೆ ಸಂಸ್ಥೆಯ ಬಸ್‍ಗಳ ಮೇಲೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನೀಡಿರುವ ಜಾಹಿರಾತುಗಳ ಬಗ್ಗೆ ಎನ್‍ಸಿಪಿ ಶಾಸಕ ಜಿತೇಂದ್ರ ಆವ್ಹಾಡ್ ತಂಟೆ ತೆಗೆದಿದ್ದಾರೆ. ಕರ್ನಾಟಕ ರಾಜ್ಯದ ಜಾಹಿರಾತುಗಳು ಮಹಾರಾಷ್ಟ್ರದ ಬಸ್‍ಗಳ ಮೇಲೆ ಏಕಿರಬೇಕು ಎಂದು ಜಿತೇಂದ್ರ ಆಹ್ವಾಡ್ ಉದ್ದಟತನದ ಮಾತಾಡಿದ್ದಾರೆ.
ಶಾಸಕ ಜಿತೇಂದ್ರ ಆವ್ಹಾಡ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ಜಾಹಿರಾತುಗಳನ್ನು ಬಸ್‍ಗಳ ಮೇಲಿಂದ ತೆರವು ಮಾಡದಿದ್ದರೆ ಬಸ್‍ಗಳನ್ನು ಒಡೆದು ಹಾಕುವುದಾಗಿ ಪುಂಡಾಟಿಕೆ ಮೆರೆದಿದ್ದಾರೆ. ಕನ್ನಡಿಗರಿಂದ ಜಿತೇಂದ್ರ ಆವ್ಹಾಡ್ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಾದಾಗಿರಿ ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಪರಿಷತ್ ಸದಸ್ಯೆ ಡಾ.ಮನಿಷಾ ಹೇಳಿಕೆ ನೀಡಿದ ಘಟನೆ ಮಾಸುವ ಮುನ್ನವೇ ಈ ಹೇಳಿಕೆ ಹೊರಬಿದ್ದಿದೆ.