ನವದೆಹಲಿ: ಸುಮಾರು 10 ತಿಂಗಳುಗಳ ಜೈಲು ವಾಸದ ನಂತರ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಕೊನೆಗೂ ಇಂದು ಬಿಡುಗಡೆ ಭಾಗ್ಯ ಲಭಿಸಿದೆ.
ಇಂದು ಸಂಜೆ ಪಟಿಯಾಲಾದ ಸೆಂಟ್ರಲ್ ಜೈಲಿನಿಂದ ಸಿಧು ಹೊರಬರುತ್ತಲೇ ಡೋಲು ಬಡಿದು, ಘೋಷಣೆಗಳನ್ನು ಕೂಗಿ ಅಭಿಮಾನಿಗಳು ಸ್ವಾಗತಿಸಿದರು. ಜೈಲಿನಿಂದ ಬಿಡುಗಡೆಯಾದ ನಂತರ ಮಾತನಾಡಿದ ಸಿಧು, ತಾನು ರಾಹುಲ್ ಗಾಂಧಿ ಜೊತೆಗಿದ್ದೇನೆ. ಈ ದೇಶದಲ್ಲಿ ಸರ್ವಾಧಿಕಾರಿಗಳು ಬಂದಾಗಲೆಲ್ಲಾ ಒಂದೊಂದು ಕ್ರಾಂತಿ ಆಗಿದೆ. ಈಗ ನೀವೆಲ್ಲಾ ನೋಡಲು ಹೊರಟಿರೋದು ರಾಹುಲ್ ಗಾಂಧಿ ಎಂಬ ಕ್ರಾಂತಿಯನ್ನು. ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಉರುಳಿಸಿಬಿಡುತ್ತಾರೆ ಎಂದ್ರು.
34 ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಸಿಧುಗೆ ಶಿಕ್ಷೆಯಾಗಿತ್ತು. ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.