ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು ಅವರಿಗೆ ಸಂಕಷ್ಟಗಳು ಹೆಚ್ಚಿವೆ.
ತಮ್ಮ ಪತ್ನಿ ಡಾ. ನವಜೋತ್ ಕೌರ್ ಸಿಧು ಅವರ ಕ್ಯಾನ್ಸರ್ ಗೆ ಆಯುರ್ವೇದ ಮೂಲಕ ಚಿಕಿತ್ಸೆ ನೀಡಿರುವುದಾಗಿ ಸಿಧು ಇತ್ತೀಚೆಗೆ ಹೇಳಿಕೊಂಡಿದ್ದರು. ಆದಾಗ್ಯೂ, ಅವರ ಹೇಳಿಕೆಯನ್ನು ತಜ್ಞರು ತಿರಸ್ಕರಿಸಿದರು. ಇಂತಹ ಪರಿಸ್ಥಿತಿಯಲ್ಲಿ ಇದೀಗ ಛತ್ತೀಸ್‌ಗಢ ಸಿವಿಲ್ ಸೊಸೈಟಿಯಿಂದ (ಸಿಸಿಎಸ್) ನವಜೋತ್ ಸಿಂಗ್ ಸಿಧು ಅವರ ಪತ್ನಿಗೆ 850 ಕೋಟಿ ರೂಪಾಯಿ ನೋಟಿಸ್ ಕಳುಹಿಸಲಾಗಿದೆ.
ತಮ್ಮ ಪತ್ನಿ ನವಜೋತ್ ಕೌರ್ ಅವರ 4ನೇ ಹಂತದ ಕ್ಯಾನ್ಸರ್‌ಗೆ ಡಯಟ್ ಪ್ಲಾನ್ ಮೂಲಕ ಚಿಕಿತ್ಸೆ ನೀಡಲಾಗಿದೆ. ಈ ಡಯಟ್ ಪ್ಲಾನ್ ಮೂಲಕ ಪತ್ನಿಯ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಿದ್ದಾರೆ. ನನಗೆ ಡಾಕ್ಟರ್ ಎಂದರೆ ದೇವರ ರೂಪ ಎಂದು ಸಿದ್ದು ಹೇಳಿದ್ದಾರೆ. ಆರಂಭದಲ್ಲಿ ಕ್ಯಾನ್ಸರ್ ಅನ್ನು ಅಲೋಪತಿ ಮೂಲಕ ಮಾತ್ರ ನಿಯಂತ್ರಿಸಲಾಗುತ್ತಿತ್ತು. ನನ್ನ ಮನೆಯಲ್ಲಿ ಒಬ್ಬ ವೈದ್ಯರಿದ್ದರು. ಅಲ್ಲದೇ ತಮ್ಮ ಪತ್ನಿಯ ಸಂಪೂರ್ಣ ಆಹಾರ ಯೋಜನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದರು.
ಸಿಧು ಈ ಹೇಳಿಕೆಯಿಂದಾಗಿ ದೇಶಾದ್ಯಂತ ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಂದ ಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಯಿತು.