Monday, April 21, 2025
Homeಟಾಪ್ ನ್ಯೂಸ್Modi: ಇಂದು ಕನ್ಯಾಕುಮಾರಿಗೆ ಪ್ರಧಾನಿ ಮೋದಿ : ಭದ್ರತೆಗೆ ಎರಡು ಸಾವಿರ ಪೊಲೀಸ್ ಸಿಬ್ಬಂದಿ

Modi: ಇಂದು ಕನ್ಯಾಕುಮಾರಿಗೆ ಪ್ರಧಾನಿ ಮೋದಿ : ಭದ್ರತೆಗೆ ಎರಡು ಸಾವಿರ ಪೊಲೀಸ್ ಸಿಬ್ಬಂದಿ

ಕನ್ಯಾಕುಮಾರಿ: ಕಳೆದ 2 ತಿಂಗಳಿನಿಂದ ಲೋಕಸಭಾ ಚುನಾ ವಣೆಯ ಪ್ರಚಾರದ ಭಾಗವಾಗಿ ದೇಶದ ಉದ್ದಗಲಕ್ಕೂ ಎಡೆಬಿಡದೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರದಿಂದ 3 ದಿನಗಳ ಕಾಲ ಧ್ಯಾನದಲ್ಲಿರಲಿದ್ದರೆ.

ಮೋದಿ, ದೇಶದ ದಕ್ಷಿಣದ ಅಂಚಿನಲ್ಲಿರುವ ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 3 ದಿನ ಧ್ಯಾನ ನಡೆಸಲಿದ್ದಾರೆ. ಅವರು ಸುಮಾರು 45 ತಾಸು ಕಾಲ ಸ್ಮಾರಕದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗಿದ್ದು, ಅವರ ಧ್ಯಾನಕ್ಕೆ ಹಾಗೂ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

ಜೂ.1ರ ಕೊನೆಯ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬೀಳಲಿದೆ. ಸಂಜೆ 5 ಗಂಟೆ ವೇಳೆಗೆ ಮೋದಿ ಕನ್ಯಾಕುಮಾರಿಗೆ ಆಗಮಿಸಿ ಧ್ಯಾನ ‘ಮಂಟಪದಲ್ಲಿ ಧ್ಯಾನ ನಡೆಸಲಿದ್ದಾರೆ. ಜೂ.1 ರಂದು ಮಧ್ಯಾಹ್ನ 3 ಗಂಟೆಗೆ ತೆರಳಲಿದ್ದಾರೆ. ಅವರ ಭೇಟಿಯ ಅವಧಿ 45 ಗಂಟೆಗಳಾಗಿವೆ.

ಬಿಗಿ ಭದ್ರತೆ :
ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ವಾಸ್ತವ್ಯ ಹಿನ್ನೆಲೆ ಕನ್ಯಾಕುಮಾರಿಯಲ್ಲಿ ಎರಡು ಸಾವಿರ ಮಂದಿ ಪೊಲೀಸ್ ಸಿಬ್ಬಂದಿ, ವಿವಿಧ ಭದ್ರತಾ ಸಂಸ್ಥೆಗಳ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.

ಮಮತಾ ಎಚ್ಚರಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡುವುದು ಸುದ್ದಿ ವಾಹಿನಿಗಳಲ್ಲಿ ಪ್ರಸಾರಗೊಂಡಲ್ಲಿ ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
‘ಅವರು ಧ್ಯಾನ ಮಾಡಬಹುದು. ಆದರೆ ಸುದ್ದಿ ವಾಹಿನಿಗಳು ಅದನ್ನು ಪ್ರದರ್ಶಿಸುವಂತೆ ಇಲ್ಲ’ ಎಂದು ಬ್ಯಾನರ್ಜಿ ಅವರು ಹೇಳಿದ್ದಾರೆ. ಅದನ್ನು ವಾಹಿನಿಗಳು ಪ್ರದರ್ಶಿಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!