Sunday, January 25, 2026
Homeಟಾಪ್ ನ್ಯೂಸ್VLADIMIR PUTIN : ಭಾರತಕ್ಕೆ ಬಂದಿಳಿದ ರಷ್ಯಾ ಪ್ರಧಾನಿ ಪುಟಿನ್ : ಅದ್ಧೂರಿ ಸ್ವಾಗತ ಕೋರಿದ...

VLADIMIR PUTIN : ಭಾರತಕ್ಕೆ ಬಂದಿಳಿದ ರಷ್ಯಾ ಪ್ರಧಾನಿ ಪುಟಿನ್ : ಅದ್ಧೂರಿ ಸ್ವಾಗತ ಕೋರಿದ ಪ್ರಧಾನಿ ನರೇಂದ್ರ ಮೋದಿ – VIDEO

ನವದೆಹಲಿ : ಬರೋಬ್ಬರಿ 4 ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ (Vladimir Putin) ಭಾರತಕ್ಕೆ (INDIA) ಆಗಮಿಸಿದ್ದಾರೆ. ನವದೆಹಲಿಯ (New Delhi) ಪಾಲಂ ಏರ್​ಪೋರ್ಟ್​ಗೆ ಬಂದ ಪುಟಿನ್​ರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ವಾಗತಿಸಿದರು.

ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮೀರ್​​ ಪುಟಿನ್​ರನ್ನು ಪಾಲಂ ಏರ್​ಪೋರ್ಟ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು. ಆಪ್ತಮಿತ್ರನಿಗೆ ಆಲಿಂಗನ ನೀಡುವ ಮೂಲಕ ಮೋದಿ ಸ್ವಾಗತಿಸಿದರು.

 

ಪುಟಿನ್​ಗೆ ಪ್ರಧಾನಿ ಮೋದಿ ಔತಣ

ದೆಹಲಿಯಲ್ಲಿ ಲ್ಯಾಂಡ್ ಆದ ವ್ಲಾದಿಮಿರ್ ಪುಟಿನ್ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ನಿವಾಸದಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುಟಿನ್ ಭೇಟಿಯ ವೇಳೆ ಹಲವು ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದೆ.

ಉಭಯ ದೇಶಗಳ ಮಧ್ಯೆಚ ರಕ್ಷಣಾ ವ್ಯವಸ್ಥೆ, ತೆರಿಗೆ, ವ್ಯಾಪಾರ ಸೇರಿದಂತೆ ಹಲವು ಮಾತುಕತೆ ನಡೆಯಲಿದೆ. ಇದೇ ವೇಳೆ 23ನೇ ಭಾರತ ಹಾಗೂ ರಷ್ಯಾ ದ್ವಿಪಕ್ಷೀಯ ಸಂಬಂಧದ ಸಭೆಯಲ್ಲಿ ಮೋದಿ ಹಾಗೂ ಪುಟಿನ್ ಪಾಲ್ಗೊಳ್ಳಲಿದ್ದಾರೆ.

ದೆಹಲಿಯಲ್ಲಿ ಭಾರೀ ಬಿಗಿಭದ್ರತೆ

ವ್ಲಾದಿಮಿರ್ ಪುಟಿನ್ ದೆಹಲಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಹೀಗಾಗಿ ಭದ್ರತಾ ಪಡೆಗಳು ಭಾರಿ ಭದ್ರತೆ ಕೈಗೊಂಡಿದೆ. ಪುಟಿನ್ ಎರಡು ದಿನಗಳ ಭೇಟಿ ಕಾರಣದಿಂದ ದೆಹಲಿಯಲ್ಲಿ ಎರಡು ದಿನ ಹೈ ಅಲರ್ಟ್ ಘೋಷಿಸಿಲಾಗಿದೆ.

ಪುಟಿನ್ ರಷ್ಯಾದಿಂದ ತೆರಳುವ ಸಮಯದಿಂದ ಹಿಡಿದು ಮರಳಿ ರಷ್ಯಾದಲ್ಲಿ ಲ್ಯಾಂಡ್ ಆಗುವವರೆಗೆ ಪ್ರತಿ ನಿಮಿಷವೂ ಭದ್ರತಾ ಪಡೆಗಳ ಟ್ರಾಕ್‌ನಲ್ಲಿರಲಿದೆ. ಪ್ರತಿ ನಿಮಿಷವೂ ಹಲವು ಭದ್ರತಾ ಎಜೆನ್ಸಿಗಳು ಪರಿಶೀಲನೆ ನಡೆಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಭಾರತದ ಭದ್ರತಾ ಪಡೆಗಳು, ಪುಟಿನ್ ಭದ್ರತಾ ಪಡೆಗಳು ಪ್ರತಿ ನಿಮಿಷ ಸಂಪರ್ಕದಲ್ಲಿ ಇರಲಿದೆ. 5,000 ಪೊಲೀಸ್ ಪಡೆಗಳ ನಿಯೋಜನೆ ಮಾಡಲಾಗಿದೆ. ಪುಟಿನ್ ಸಂಚಾರ ಮಾರ್ಗ, ಟ್ರಾಪಿಕ್ ಎಲ್ಲವವನ್ನು ಮಾನಿಟರ್ ಮಾಡಲಾಗುತ್ತಿದೆ.

ಪುಟಿನ್ ಸಾಗಲಿರುವ ಎಲ್ಲಾ ರೂಟ್‌ಗಳನ್ನು ಮ್ಯಾಪ್ ಮಾಡಲಾಗಿದೆ. ವಿವಿಐಪಿ ಮೂವಮೆಂಟ್‌ಗಳಲ್ಲಿ ಮೊದಲೇ ಭದ್ರತಾ ಪಡೆಗಳು ನಿಯೋಜನೆ ಮಾಡಲಾಗಿದೆ. ಹಲವು ಹಂತದ ಭದ್ರತೆ ಕೈಗೊಳ್ಳಲಾಗಿದೆ. ಆ್ಯಂಟಿ ಡ್ರೋನ್ ಸಿಸ್ಟಮ್ ಹಾಕಲಾಗಿದೆ.

ಯಾವೆಲ್ಲಾ ಒಪ್ಪಂದಕ್ಕೆ ಬೀಳಲಿದೆ ಅಂಕಿತ

ತೈಲ ಆಮದು ಬಗ್ಗೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಬಗ್ಗೆ ಮೋದಿ- ಪುಟಿನ್ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಟ್ರಂಪ್​ ವಿಧಿಸಿದ ಸುಂಕಾಸ್ತ್ರದ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ದಿಗ್ಗಜ್ಜರು ಸಜ್ಜಾಗಿದ್ದಾರೆ.. ರಷ್ಯಾದ Su-57E ಸ್ಟೆಲ್ತ್ ಫೈಟರ್ ಜೆಟ್‌ಗಳು, ಎಸ್​ 400, ಎಸ್​ 500 ಬಗ್ಗೆ ಒಪ್ಪಂದದ ಜೊತೆಗೆ ತಂತ್ರಜ್ಞಾನ ಹಂಚಿಕೆಗೆ ಪ್ಲಾನ್ ಮಾಡಲಾಗಿದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ನಾಯಕರು ಸಜ್ಜಾಗಿದ್ದಾರೆ.

ಉತ್ತರ ಸಮುದ್ರ ಮಾರ್ಗವನ್ನ ಹೆಚ್ಚಿಗೆ ಸದುಪಯೋಗ ಪಡಿಸಿಕೊಳ್ಳುವುದು.. ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತಾಂತ್ರಿಕ ಬೆಂಬಲ ನೀಡುವುದು. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ ಮಾಡಿ, ಜನರ ನಡುವಿನ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ.. ಭಾರತವು ವಿಶ್ವದ ಮೊದಲ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟವನ್ನು ಸ್ಥಾಪಿಸಿ ಪ್ರಾಣಿಗಳನ್ನ ರಕ್ಷಿಸುತ್ತಿದೆ. ಇದರಲ್ಲಿ ರಷ್ಯಾ ಸಹ ಭಾಗವಹಿಸುವ ಸಾಧ್ಯತೆ ಇದೆ.. ಉದ್ಯೋಗಗಳು ಮತ್ತು ವಲಸೆ ಕ್ಷೇತ್ರದಲ್ಲಿ ಪ್ರಮುಖ ಒಪ್ಪಂದಗಳನ್ನ ಮಾಡಲಿದ್ದಾರೆ.. ಇನ್ನು ವೈದ್ಯಕೀಯ ಶಿಕ್ಷಣ, ಸಂಶೋಧನೆಯಲ್ಲಿ ಸಹಕಾರ ನೀಡುವ ಒಪ್ಪಂದ ಮಾಡಿಕೊಲ್ಳುವ ಸಾಧ್ಯತೆ ಇದೆ..

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!