ಪ್ರಧಾನಿ ನರೇಂದ್ರ ಮೋದಿ ಏ.8 –ಏ.9 ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಪ್ರವಾಸದ ತಾತ್ಕಾಲಿಕ ವೇಳಾಪಟ್ಟಿ ಬುಧವಾರ ಬಿಡುಗಡೆಯಾಗಿದೆ. ಹುಲಿ ಸಂರಕ್ಷಣಾ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.
ಏ.8 ರಂದು ರಾತ್ರಿ ಮೈಸೂರಿಗೆ ಬರಲಿರುವ ಪ್ರಧಾನಿ ಅಂದು ರಾತ್ರಿ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏ. 9 ರಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಮೂಲಕ ಚಾಮರಾಜನಗರದ ಜಿಲ್ಲೆಯ ಬಂಡೀಪುರಕ್ಕೆ ತೆರಳಲಿರುವ ಪ್ರಧಾನಿ ಮೋದಿ, ನೀಲಗಿರಿ ಅರಣ್ಯ ಪ್ರದೇಶ ವೀಕ್ಷಣೆ, ಸಫಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೈಸೂರಿಗೆ ಮರಳಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಏ. 9 ರಂದು ಕೆಎಸ್‍ಯು ಘಟಿಕೋತ್ಸವz ಭವನದಲ್ಲಿ ಹುಲಿ ಸಂರಕ್ಷಣಾ ಯೋಜನೆ 50 ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಅದೇ ದಿನ ಮಧ್ಯಾಹ್ನ ದೆಹಲಿಗೆ ವಾಪಸಾಗಲಿದ್ದಾರೆ. ಈಗಾಗಲೇ ಮೋದಿ ಭೇಟಿ ಹಿನ್ನೆಲೆಯಲ್ಲಿ ವಿವಿಧ ಭದ್ರತಾ ತಂಡಗಳು ಬಂಡಿಪುರದಲ್ಲಿ ಸ್ಥಳಪರಿಶೀಲನೆ ನಡೆಸುತ್ತಿದೆ.