ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತ ಎಸ್. ಮಣಿಕಂದನ್ ಅವರೊಡನೆ ತೆಗೆದುಕೊಂಡ ಸೆಲ್ಫಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶನಿವಾರ ಚೆನ್ನೈ ಗೆ ಭೇಟಿ ನೀಡಿದ ಪ್ರಧಾನಿ, ಇದೆ ವೇಳೆ ತಮ್ಮ ವಿಶೇಷ ಚೇತನ ಕಾರ್ಯಕರ್ತ ಮಣಿಕಂದನ್ ರನ್ನು ಭೇಟಿಯಾದರು.
ಈ ಬಗ್ಗೆ ತಮಿಳು ಭಾಷೆಯಲ್ಲೀ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂಥ ಕಾರ್ಯಕರ್ತರನ್ನು ಹೊಂದಿರುವುದು ನನಗೆ ತೀವ್ರ ಹೆಮ್ಮೆ ಎನಿಸುತ್ತದೆ. ಈತನ ಜೀವನ ಪ್ರಯಾಣ ಇತರರಿಗೂ ಸ್ಫೂರ್ತಿ ನೀಡುವಂತಿದೆ. ಜೊತೆಗೆ ಈತ ಪಕ್ಷ ಹಾಗೂ ಸಿದ್ದಾಂತಗಳೊಡನೆ ಹೊಂದಿರುವ ಬದ್ಧತೆಯೂ ಸಹ ಸ್ಪೂರ್ತಿದಾಯಕವಾಗಿದೆ. ಈತನ ಜೀವನಕ್ಕೆ ಶುಭ ಹಾರೈಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ