ಮೈಸೂರು: ಹುಲಿ ಸಂರಕ್ಷಣಾ ತಾಣ ಬಂಡಿಪುರದ ಸುವರ್ಣೋತ್ಸವ ಸಮಾರಂಭಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಮೈಸೂರು ಭರ್ಜರಿಯಾಗಿಯೇ ಸಿದ್ದಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಲಿರುವ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ದಿಂಬು, ಬೆಡ್‍ಶೀಟ್ ಪ್ರತಿಯೊಂದೂ ಮೋದಿಮಯವಾಗಿದೆ.
ಪ್ರಧಾನಿ ಮೋದಿ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಭಾನುವಾರ ರಾತ್ರಿ ಮೈಸೂರಿಗೆ ಆಗಮಿಸಲಿರುವ ಮೋದಿ, ರಾಡಿಸನ್ ಬ್ಲೂ ಹೋಟೆಲ್‍ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಮೋದಿ ಭೇಟಿಯ ಸ್ಮರಣಿಕೆಯಾಗಿ ಹೋಟೆಲ್‍ನ ಟವೆಲ್, ತಲೆದಿಂಬಿನ ಕವರ್, ಟೇಬಲ್ ಟಾಬ್ ಹೀಗೆ ಪ್ರತಿಯೊಂದು ವಸ್ತುಗಳಲ್ಲೂ ಮೋದಿ ಚಿತ್ರ ರಾರಾಜಿಸುತ್ತಿದೆ.
ಏ. 9 ರಂದು ಮೈಸೂರಿಗೆ ಪ್ರಧಾನಿ ಆಗಮಿಸಲಿದ್ದು, ಬಂಡಿಪುರ ರಕ್ಷಿತಾರಣ್ಯದಲ್ಲಿ ಕಾಲ ವ್ಯಯಿಸಲಿದ್ದಾರೆ. ತಮ್ಮ ಭೇಟಿಯ ಹೆಚ್ಚಿನ ಭಾಗವನ್ನು ವಿವಿಧ ಕಾರ್ಯಕ್ರಮಗಳಲ್ಲಿ ಮೈಸೂರಿನಲ್ಲೇ ಕಳೆಯಲಿರುವ ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಈಗಾಗಲೇ ಭದ್ರತಾ ತಂಡಗಳು ಪರಿಶೀಲನೆ, ತಪಾಸಣೆ ನಡೆಸಿದೆ.