Wednesday, August 19, 2026
Homeಟಾಪ್ ನ್ಯೂಸ್NARENDRA MODI : ಆತ್ಮೀಯ ಸ್ನೇಹಿತನಿಗೆ ಸ್ವಾಗತ : ಪುಟಿನ್‌ ಭೇಟಿ ಕುರಿತು ಮೋದಿ ಟ್ವೀಟ್

NARENDRA MODI : ಆತ್ಮೀಯ ಸ್ನೇಹಿತನಿಗೆ ಸ್ವಾಗತ : ಪುಟಿನ್‌ ಭೇಟಿ ಕುರಿತು ಮೋದಿ ಟ್ವೀಟ್

ನವದೆಹಲಿ : ಭಾರತದ ಆಪ್ತ ರಾಷ್ಟ್ರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir putin) ದೆಹಲಿಗೆ ಬಂದಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಪುಟಿನ್​ರನ್ನು ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಹಸ್ತಲಾಘವ ಮತ್ತು ಅಪ್ಪುಗೆ ಮೂಲಕ ಪುಟಿನ್ ಅವರನ್ನು ಸ್ವಾಗತಿಸಿದ ಮೋದಿ ಬಳಿಕ ಏರ್​ಪೋರ್ಟ್​ನಿಂದ ಹೊರಟರು. ಈ ವೇಳೆ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದು ವಿಶೇಷ. ಇದೇ ಸಂದರ್ಭದಲ್ಲಿ ತೆಗೆದುಕೊಂಡ ಸೆಲ್ಫಿಯನ್ನು ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ.

‘ನನ್ನ ಸ್ನೇಹಿತ, ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಇಂದು ಸಂಜೆ ಮತ್ತು ನಾಳೆ ನಡೆಯುವ ನಮ್ಮ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ಶಾಶ್ವತವಾದುದು, ಇದು ನಮ್ಮ ಜನರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

2025 ರ ಸೆಪ್ಟೆಂಬರ್‌ನಲ್ಲಿ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ವ್ಲಾಡಿಮೀರ್ ಪುಟಿನ್ ಒಂದೇ ವಾಹನದಲ್ಲಿ ಪ್ರಯಾಣಿಸಿದ್ದರು.
ಸಂಜೆ 6:15ಕ್ಕೆ ಪಾಲಂ ವಿಮಾನ ನಿಲ್ದಾಣಕ್ಕೆ ಪುಟಿನ್‌ ಬಂದಿಳಿದ್ರು. ವ್ಲಾಡಿಮೀರ್ ಪುಟಿನ್‌ಗೆ ಪ್ರಧಾನಿ ಮೋದಿ ಅಪ್ಪುಗೆ ಆತ್ಮೀಯ ಸ್ವಾಗತ ಕೋರಿದರು. ರಷ್ಯಾ ಅಧ್ಯಕ್ಷರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಬಳಿಕ ಒಂದೇ ಕಾರಿನಲ್ಲಿ ಮೋದಿ ಮತ್ತು ಪುಟಿನ್‌ ಪ್ರಯಾಣಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕೋ ಜೊತೆಗಿನ ಭಾರತದ ತೈಲ ವ್ಯಾಪಾರದ ವಿರುದ್ಧ ಸುಂಕ ಅಸ್ತ್ರ ಪ್ರಯೋಗಿಸಿದ್ದರು. ಆ ಸಂದರ್ಭದಲ್ಲೇ SCO ನಲ್ಲಿ ವ್ಲಾಡಿಮೀರ್ ಪುಟಿನ್‌ ಮತ್ತು ಮೋದಿ ಒಟ್ಟಿಗೆ ಕಾರು ಪ್ರಯಾಣ ಮಾಡಿದ್ದು ಅಮೆರಿಕಗೆ ಟಕ್ಕರ್‌ ಕೊಟ್ಟಂತಿತ್ತು.

ವೆಲ್​ ಕಮ್ ವ್ಲಾಡಿಮೀರ್ ಪುಟಿನ್

ಪ್ರಧಾನಿ ಮೋದಿ ಕ್ಷೇತ್ರ ವಾರಾಣಸಿಯಲ್ಲಿ ವ್ಲಾಡಿಮೀರ್ ಪುಟಿನ್ ಪರ ಭರ್ಜರಿ ಱಲಿ ಮಾಡಲಾಗಿದೆ. ವಿಶಾಲ ಭಾರತ ಸಂಸ್ಥಾನ ಆಯೋಜಿಸಿದ್ದ ಮೆರವಣಿಗೆ ಸುಭಾಷ್ ಭವನದಿಂದ ಮುನ್ಶಿ ಪ್ರೇಮ್‌ಚಂದ್ ಸ್ಮೃತಿ ಗೇಟ್‌ನ ತನಕ ಸಾಗಿತು.

ಅಭಿಮಾನಿಗಳು ಮೋದಿ ಮತ್ತು ಪುಟಿನ್ ಪೋಸ್ಟರ್‌ಗಳನ್ನು ಹಿಡಿದು ‘ಭಾರತ-ರಷ್ಯಾ ಸಂಬಂಧ್ ಜಿಂದಾಬಾದ್, ಭಾರತ-ರಷ್ಯಾ ಕಿ ದೋಸ್ತಿ ಮತ್ತು ವಿಶ್ವಕ್ಕೆ ಭಾರತ-ರಷ್ಯಾ ಸ್ನೇಹ ಬೇಕು’ ಎಂದು ಘೋಷಣೆಗಳನ್ನು ಕೂಗಿದರು. ಮೋದಿ ಬೆಂಬಲಿಗರು ಪುಟಿನ್ ಛಾಯಾಚಿತ್ರಕ್ಕೆ ಆರತಿ ಬೆಳಗಿದರು. ಡ್ರಮ್‌ಗಳನ್ನು ಬಾರಿಸಿದರು.

‘ಮೋದಿ ಮತ್ತು ಪುಟಿನ್ ಪ್ರಜಾಪ್ರಭುತ್ವ, ದೇಶದ ಗಡಿಗಳನ್ನು ಮೀರಿ ಬೆಳೆದಿರೋ ನಾಯಕರು. ಇಬ್ಬರೂ ಒಟ್ಟಾಗಿ, ಜಗತ್ತನ್ನು ಶಾಂತಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ’ ಎಂದು ವಿಶಾಲ ಭಾರತ ಸಂಸ್ಥಾನದ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ಶ್ರೀಗುರುಜಿ ಹೇಳಿದರು.

ಇದನ್ನೂ ಓದಿ : ಅಂದು.. ಇಂದು.. ಒಂದೇ ಕಾರಿನಲ್ಲಿ ಮೋದಿ- ಪುಟಿನ್‌ ಪ್ರಯಾಣ : ಆ ದಿನದ ರಹಸ್ಯ ಬಿಚ್ಚಿಟ್ಟ ರಷ್ಯಾ ಅಧ್ಯಕ್ಷ! -VIDEO

ಹೆಚ್ಚಿನ ಸುದ್ದಿ

Change Language »
error: Content is protected !!