Wednesday, February 19, 2025
Homeಟಾಪ್ ನ್ಯೂಸ್ಒಕ್ಕಲಿಗರು ಬೇರೆಯವರ ಅನ್ನ ಕಿತ್ತುಕೊಳ್ಳುವವರಲ್ಲ: ಮೀಸಲಾತಿ ಬಗ್ಗೆ ಸ್ಪಟಿಕಪುರಿ ಸ್ವಾಮೀಜಿ ಕಿಡಿ

ಒಕ್ಕಲಿಗರು ಬೇರೆಯವರ ಅನ್ನ ಕಿತ್ತುಕೊಳ್ಳುವವರಲ್ಲ: ಮೀಸಲಾತಿ ಬಗ್ಗೆ ಸ್ಪಟಿಕಪುರಿ ಸ್ವಾಮೀಜಿ ಕಿಡಿ

 2ಬಿ ವರ್ಗದ ಮೂಲಕ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದುಹಾಕಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ 2 ಪರ್ಸೆಂಟ್ ಹಂಚಿರುವ ಬಗ್ಗೆ ತುಮಕೂರಿನ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಒಕ್ಕಲಿಗರು ಬೇರೆಯವರ ಅನ್ನವನ್ನು ಕಸಿದು ತಿನ್ನಬೇಕು ಎನ್ನುವವರಲ್ಲ. ಶ್ರಮಿಕ ವರ್ಗ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಕೂಡಲೇ ಶೇ. 4 ರಿಂದ ಶೇ.16ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

“ಯಾರದ್ದೋ ಮೀಸಲಾತಿ ಕಿತ್ತು ಶೇ.2 ಮೀಸಲಾತಿ ಹೆಚ್ಚಿಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಪಾವು ಮಜ್ಜಿಗೆ ಕೊಟ್ಟಂತಾಗಿದೆ. ಒಕ್ಕಲಿಗರು ಬೇರೆಯವರ ಅನ್ನವನ್ನ ಕಿತ್ತು ತಿನ್ನುವವರಲ್ಲ, ಈಗ ಘೋಷಣೆ ಮಾಡಿರುವ  2 ಪರ್ಸೆಂಟ್ ಅನ್ನು ಸ್ವೀಕಾರ ಮಾಡಬೇಕೋ, ಬೇಡವೋ ಎಂಬುದು ಗೊಂದಲವಾಗಿದೆ. ಇನ್ನೊಬ್ಬರಿಂದ ಕಿತ್ತು ಕೊಡುವುದನ್ನು ಉದಾರ ಮನಸ್ಥಿತಿಯ ಒಕ್ಕಲಿಗ ಸಮುದಾಯ ಒಪ್ಪುವುದಿಲ್ಲ” ಎಂದರು.

ನಮ್ಮ ಸುಮುದಾಯದಲ್ಲಿ ಶೇಕಡಾ 60 ರಷ್ಟು ಜನ ಆರ್ಥಿಕವಾಗಿ ಹಿಂದುಳಿದಿದ್ದು, ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಯಾವ ರೀತಿ ಸರಿಪಡಿಸುತ್ತಿರಿ ಅನ್ನುವುದನ್ನು ಮೂರು ಪ್ರಮುಖ ಪಕ್ಷಗಳು ಬಹಿರಂಗ ಪಡಿಸಬೇಕು. ಅದರ ಆಧಾರ ಮೇಲೆ ಸಮುದಾಯ ಚುನಾವಣೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಹೆಚ್ಚಿನ ಸುದ್ದಿ

error: Content is protected !!