Wednesday, August 19, 2026
Homeಟಾಪ್ ನ್ಯೂಸ್NANDINI : ವಾಣಿಜ್ಯ ಸಿಲಿಂಡರ್ ಕೊರತೆ "ನಂದಿನಿ" ಉತ್ಪನ್ನಗಳ ಸರಬರಾಜಿನಲ್ಲೂ ವ್ಯತ್ಯಯ..?

NANDINI : ವಾಣಿಜ್ಯ ಸಿಲಿಂಡರ್ ಕೊರತೆ “ನಂದಿನಿ” ಉತ್ಪನ್ನಗಳ ಸರಬರಾಜಿನಲ್ಲೂ ವ್ಯತ್ಯಯ..?

ಬೆಂಗಳೂರು : ಕನ್ನಡಿಗರ ಹೆಮ್ಮೆಯ ನಂದಿನಿಯ (Nandini ) ಉತ್ಪನ್ನಗಳ (Products )ಸರಬರಾಜಿನಲ್ಲೂ ವತ್ಯಯ ಭೀತಿ ಆವರಿಸಿದೆ. ಸಿಲಿಂಡರ್ ಕೊರತೆ ಎಫೆಕ್ಟ್ ನಿಂದ KMF ಸಂಕಷ್ಟಕ್ಕೆ ಸಿಲುಕಿದೆ.

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್‌ನಿಂದ ಕೆಎಂಎಫ್‌ಗೆ (KMF )ಕಮರ್ಷಿಯಲ್ ಸಿಲಿಂಡರ್ ಕೊರತೆ ಎದುರಾಗಿದ್ದು, ಇನ್ನೆರಡು ದಿನಗಳಲ್ಲಿ ಹಾಲಿನ ಉತ್ಪನ್ನಗಳ ತಯಾರಿಕೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್​ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿದ್ದು, ನಂದಿನಿ ಸರಬರಾಜು ಮಾಡುವ ಅನೇಕ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ
ಮಾರ್ಚ್ 20ರ ಒಳಗೆ ಕಮರ್ಷಿಯಲ್ ಎಲ್‌ಪಿಜಿ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಸಿಹಿ, ಖಾರದ ತಿಂಡಿ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ.

ಕೆಎಂಎಫ್‌ನ ವಾರ್ಷಿಕ ಸುಮಾರು 25,000 ಕೋಟಿ ರೂಪಾಯಿಗಳಿಂದ 30,000 ಕೋಟಿ ರೂಪಾಯಿಗಳವರೆಗಿದೆ. ದಿನವೊಂದಕ್ಕೆ ಸರಾಸರಿ 85 ಲಕ್ಷದಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ ಸುಮಾರು 40 ಲಕ್ಷ ಲೀಟರ್‌ಗಿಂತಲೂ ಅಧಿಕ ಹಾಲು ಪ್ರತಿದಿನ ಮಾರಾಟವಾಗುತ್ತಿದೆ. ಇದು ದೇಶದಲ್ಲಿ ಅಗ್ರಗಣ್ಯ ಬ್ರಾಂಡ್ ಗಳಲ್ಲಿ ಒಂದಾಗಿದೆ. ಇದೀಗ ಯುದ್ಧದ ಎಫೆಕ್ಟ್ ನಂದಿನಿಗೂ ತಟ್ಟಿದೆ.

ಇದನ್ನೂ ಓದಿ : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ – ಹೂಡಿಕೆದಾರರಿಗೆ ಆಘಾತ, ಸೆನ್ಸೆಕ್ಸ್ 1,900 ಪಾಯಿಂಟ್ಸ್ ಪತನ! 

ಹೆಚ್ಚಿನ ಸುದ್ದಿ

Change Language »
error: Content is protected !!