Monday, August 17, 2026
Homeಟಾಪ್ ನ್ಯೂಸ್NANDINI MILK : ತುಪ್ಪದ ಬಳಿಕ ಹಾಲು, ಬೆಣ್ಣೆಯೂ ದುಬಾರಿ? ಸುಳಿವು ಕೊಟ್ಟ ಡಿ.ಕೆ ಸುರೇಶ್

NANDINI MILK : ತುಪ್ಪದ ಬಳಿಕ ಹಾಲು, ಬೆಣ್ಣೆಯೂ ದುಬಾರಿ? ಸುಳಿವು ಕೊಟ್ಟ ಡಿ.ಕೆ ಸುರೇಶ್

ಬೆಂಗಳೂರು : ನಂದಿನ ತುಪ್ಪದ ಬೆಲೆ ಏರಿಕೆ ಆಯ್ತು.. ಈಗ ಹಾಲು (Nandini Milk), ಬೆಣ್ಣೆ ದರವೂ ದುಬಾರಿ ಆಗಬಹುದು ಎಂದು ಬಮೂಲ್​ ಅಧ್ಯಕ್ಷ ಡಿ.ಕೆ ಸುರೇಶ್ (DK Suresh) ಹೇಳಿದ್ದಾರೆ.

ಕೆಎಂಎಫ್ ಒಂದು ಕೆಜಿ ನಂದಿನಿ ತುಪ್ಪಕ್ಕೆ 90 ರೂಪಾಯಿ ದರ ಏರಿಸಿರೋ ಬಗ್ಗೆ ಮಾತಾಡಿದ ಬಮೂಲ್​ ಅಧ್ಯಕ್ಷ ಡಿ.ಕೆ ಸುರೇಶ್, ನಂದಿನಿ ಬೆಣ್ಣೆ ದರ ಹೆಚ್ಚಳವಾಗಬಹುದು ಎಂದು ಹೇಳಿದ್ದಾರೆ.

ಬೆಂಗಳೂರು ಹಾಲು ಮಹಾ ಮಂಡಳದ ಅಧ್ಯಕ್ಷರಾಗಿರೋ ಡಿ.ಕೆ ಸುರೇಶ್​, ‘ಹಣ ಇದ್ದವರು ತುಪ್ಪ ತಿನ್ನುವುದರಿಂದ ಬೆಲೆ ಹೆಚ್ಚಳವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ನಂದಿನಿ ತುಪ್ಪದ ಬೆಲೆ ಕಡಿಮೆ ಇದೆ. ಬೇರೆ ಬ್ರ್ಯಾಂಡ್​ಗಳಿಗೆ ಹೋಲಿಸಿದ್ರೆ ನಮ್ಮ ದರ ಕಡಿಮೆ’ ಎಂದು ಹೇಳಿದರು.

‘ಹಾಲು ಮತ್ತು ಬೆಣ್ಣೆಯ ದರವನ್ನು ಹೆಚ್ಚಿಸುವ ಪ್ರಸ್ತಾಪ ಇದೆ. ರಾಜ್ಯ ಸರ್ಕಾರ ಏನ್ ಮಾಡುತ್ತೆ ನೋಡಬೇಕಿದೆ’ ಎಂದು ಬಮೂಲ್​ ಅಧ್ಯಕ್ಷ ಡಿ.ಕೆ ಸುರೇಶ್ ಹೇಳಿದರು.

ಕೇಂದ್ರ ಸರ್ಕಾರದ ಜಿಎಸ್‌ಟಿ ದರ ಇಳಿಕೆಯಿಂದ ಜನಸಾಮಾನ್ಯರಿಗೆ ರಿಲೀಫ್ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಎಂಎಫ್ ನಂದಿನಿ ತುಪ್ಪದ ಬೆಲೆಯನ್ನು ಏಕಾಏಕಿ 90 ರೂಪಾಯಿ ಏರಿಸಿದ್ದು, ಈ ಲಾಭವನ್ನು ಜನರಿಗೆ ನೀಡದಂತೆ ಮಾಡಿದೆ.

ಮೊದಲು 610 ರೂಪಾಯಿ ಇದ್ದ ಲೀಟರ್​​ ತುಪ್ಪದ ಬೆಲೆ ಈಗ 700 ರೂಪಾಯಿಗೆ ಹೆಚ್ಚಳವಾಗಿದ್ದು, ಇದರಿಂದ ಜನರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

ಹೊಸ ಜಿಎಸ್​​ಟಿ ನೀತಿ ಸೆಪ್ಟೆಂಬರ್ 22ರಿಂದ ಜಾರಿ ಮಾಡಲಾಗಿತ್ತು. ಇದರಿಂದ 275 ಸರಕುಗಳ ಮೇಲೆ ತೆರಿಗೆ ಕಡಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಇದನ್ನ ಐತಿಹಾಸಿಕ ದೀಪಾವಳಿ ಉಡುಗೊರೆ ಎಂದಿದ್ದರು.

ಇದನ್ನೂ ಓದಿ : ಗ್ರಾಹಕರಿಗೆ ಬೆಲೆ ಏರಿಕೆ ಶಾಕ್​ ಕೊಟ್ಟ ಕೆಎಂಎಫ್ – ನಂದಿನಿ ತುಪ್ಪದ ದರ ಏಕಾಏಕಿ 90 ರೂ.ಹೆಚ್ಚಳ!

ನಂದಿನಿ ತುಪ್ಪದ ದರ ಏರಿಕೆ

ಕೆಎಂಎಫ್ ನಂದಿನಿ ತುಪ್ಪದ ಬೆಲೆ ಎಷ್ಟಿರಲಿದೆ ಎಂದು ನೋಡುವುದಾದರೆ, 50 ಎಂಎಲ್ ಪ್ಯಾಕೇಟ್ ಬೆಲೆ 47 ರೂಪಾಯಿ. 100 ಎಂಎಲ್​ಗೆ 75 ರೂಪಾಯಿ, 200 ಎಂಎಲ್​​ಗೆ 155-165 ರೂಪಾಯಿ, ಅರ್ಧ ಲೀಟರ್​ಗೆ 350 ರಿಂದ 360 ರೂಪಾಯಿ, 1 ಲೀಟರ್​ ತುಪ್ಪಕ್ಕೆ 700 ರಿಂದ 720 ರೂಪಾಯಿ, 5 ಲೀಟರ್ ಪ್ಯಾಕ್​ಗೆ 3,525 ರೂಪಾಯಿ, 15 ಲೀಟರ್​ನ ಬೃಹತ್ ಟಿನ್ ಬೆಲೆ 11,475 ರೂಪಾಯಿ ಇರಲಿದೆ.

ಇಂದಿನಿಂದಲೇ ನೂತನ ದರ ಜಾರಿಗೆ KMF ಆದೇಶ
GST ದರ ಇಳಿಕೆ ಸಂಭ್ರದಲ್ಲಿದ್ದ ಜನತೆಗೆ KMF ಶಾಕ್ ನೀಡಿದ್ದು, ನಂದಿನಿ ತುಪ್ಪದ ದರ ಕೆ.ಜಿಗೆ 90 ರೂಪಾಯಿ ಏರಿಕೆ ಮಾಡಿದೆ. ಇಂದಿನಿಂದಲೇ ನೂತನ ದರ ಜಾರಿಗೆ ಕೆಎಂಎಫ್ ಆದೇಶ ನೀಡಿದೆ. ಇದರಿಂದ ಲೀಟರ್ ​ತುಪ್ಪಕ್ಕೆ 610 ರೂಪಾಯಿ ಬದಲು 700 ರೂಪಾಯಿ ಕೊಡಬೇಕು.

ಮೊದಲು ದರ ಇಳಿಕೆ, ಈಗ ಬೆಲೆ ಏರಿಕೆ

ಜಿಎಸ್​​ಟಿ ಸ್ಲ್ಯಾಬ್ ಸುಧಾರಣೆಗೂ ಮುನ್ನ ಲೀಟರ್ ತುಪ್ಪಲ್ಲೆ 650 ರೂಪಾಯಿ ಬೆಲೆ ಇತ್ತು. ಬಳಿಕ 610 ರೂಪಾಯಿಗೆ 1 ಲೀಟರ್ ತುಪ್ಪ ಮಾರಾಟ ಆಗುತ್ತಿತ್ತು. ಯಾಕೆಂದರೆ ಜಿಎಸ್​​ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಆದ್ರೀಗ ಒಂದೇ ಬಾರಿಗೆ 90 ರೂಪಾಯಿ ದರ ಏರಿಸಿ ಕೆಎಂಎಫ್ ಶಾಕ್ಕ ಕೊಟ್ಟಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!