Saturday, January 25, 2025
Homeಟಾಪ್ ನ್ಯೂಸ್ಭಾರತದಲ್ಲಿ 70 ವರ್ಷದ ನಂತರ ಚೀತಾ ಮರಿಗಳ ಜನನ : ಕುನೋ ಉದ್ಯಾನದಲ್ಲಿ ಸಂತಸ

ಭಾರತದಲ್ಲಿ 70 ವರ್ಷದ ನಂತರ ಚೀತಾ ಮರಿಗಳ ಜನನ : ಕುನೋ ಉದ್ಯಾನದಲ್ಲಿ ಸಂತಸ

ಇತ್ತೀಚೆಗೆ ನಮೀಬಿಯಾದಿಂದ ತರಲಾಗಿದ್ದ ಚೀತಾ 4 ಮರಿಗಳಿಗೆ ಜನ್ಮ ಕೊಟ್ಟಿದೆ. ಆ ಮೂಲಕ ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾ ಸಂತತಿ 7೦ ವರ್ಷಗಳ ನಂತರ ಮತ್ತೆ ಹುಟ್ಟು ಪಡೆದಿದೆ

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಮೀಬಿಯಾದಿಂದ 5 ಗಂಡು ಹಾಗೂ 3 ಹೆಣ್ಣು ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು. ಈ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿರಿಸಲಾಗಿತ್ತು.

ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಸಿಯಾಯ ಎಂಬ ಹೆಣ್ಣು ಚಿರತೆ ನಾಲ್ಕು ಮುದ್ದುಮರಿಗಳಿಗೆ ಜನ್ಮವಿತ್ತು ಭಾರತದಲ್ಲಿ ಚೀತಾ ಸಂತತಿಯನ್ನು ಹೆಚ್ಚಿಸಿದ್ದಾಳೆ. ಈ ಸಂತಸದ ವಿಚಾರವನ್ನು ಪರಿಸರ ಸಚಿವ ಭೂಪೇಂದ್ರ ಯಾದವ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಪ್ರಧಾನಿ ಮೋದಿ ಕೂಡಾ ಟ್ವಿಟರ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ.

2 ದಿನಗಳ ಹಿಂದೆಯಷ್ಟೇ ನಮೀಬಿಯಾದಿಂದ ತರಲಾಗಿದ್ದ ಸಾಶಾ ಹೆಸರಿನ ಹೆಣ್ಣು ಚೀತಾ ಸಾವನ್ನಪ್ಪಿತ್ತು. ಈ ಬರಸವನ್ನು ಹೊಸ ಮರಿಗಳ ಜನನ ಹೋಗಲಾಡಿಸಿದ್ದು ಕುನೋ ಉದ್ಯಾನದಲ್ಲಿ ಸಂತಸ ಮನೆ ಮಾಡಿದೆ

ಹೆಚ್ಚಿನ ಸುದ್ದಿ

error: Content is protected !!