ಮಂಗಳೂರು: ಬಿಜೆಪಿಯ ಸೋಲಿನ ಹೊಣೆಯನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ತಾನೇ ವಹಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಾರಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಬಿಜೆಪಿಗೆ ಹಿನ್ನೆಡೆ ಆಗಿದೆ, ಪಕ್ಷದ ಅಧ್ಯಕ್ಷನಾಗಿ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ ಎಂದು ಹೇಳಿದ ಅವರು, ಬಂಬಲಿಸಿದ ಮತದಾರರಿಗೆ, ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
ಇವತ್ತಿನ ಫಲಿತಾಂಶ ನಾವು ಒಪ್ಪಿಕೊಂಡಿದ್ದೇವೆ, ಯಾಕೆ ಸೋತಿದ್ದೇವೆ, ಎಲ್ಲೆಲ್ಲಿ ಸೋತಿದ್ದೇವೆ ಎಂಬುದನ್ನು ಫಲಿತಾಂಶವನ್ನು ನೋಡಿ ಅವಲೋಕನ ಮಾಡುತ್ತೇವೆ ಎಂದು ಹೇಳಿದ ಅವರು, ಯಾವ ಕಾರಣಕ್ಕೆ ಹಿನ್ನಡೆಯಾಗಿದೆ ಎಂದು ನೋಡುತ್ತೇವೆ. ಗೆಲ್ಲದೇ ಇರಬೇಕಾದ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಎಂದು ಅವರು ಹೇಳಿದ್ದಾರೆ.