Friday, March 21, 2025
Homeಟಾಪ್ ನ್ಯೂಸ್ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಬಿಜೆಪಿ ಸೇರಿದ ನಾಗರಾಜ್ ಛಬ್ಬಿ

ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಬಿಜೆಪಿ ಸೇರಿದ ನಾಗರಾಜ್ ಛಬ್ಬಿ

ನವದೆಹಲಿ: ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಾಗರಾಜ್‌ ಛಬ್ಬಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ.

ಈಗಾಗಲೇ ನವದೆಹಲಿಯಲ್ಲಿರೋ ನಾಗರಾಜ್ ಛಬ್ಬಿ ಇಂದು ಸಂಜೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೆ.ಪಿ ನಡ್ಡಾ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ಋತ್ವದಲ್ಲಿ ನಾಗರಾಜ್‌ ಛಬ್ಬಿ ಬಿಜೆಪಿ ಸೇರ್ಪಡೆಗೊಂಡ್ರು

ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿ ಸೋತಿದ್ದ ಛಬ್ಬಿಗೆ ಸಂತೋಷ್‌ ಲಾಡ್ ತೀವ್ರ ಪೈಪೋಟಿ ಒಡ್ಡಿದ್ದರು. ಕಡೆಯಲ್ಲಿ ಕಾಂಗ್ರೆಸ್ ಟಿಕೆಟ್‌ ಪಡೆಯುವಲ್ಲಿ ಸಂತೋಷ್ ಲಾಡ್ ಯಶಸ್ವಿಯಾದರು.

ಕಾಂಗ್ರೆಸ್ ನಾಯಕರ ನಡೆಯಿಂದ ನಿರಾಶೆಗೊಂಡಿರುವ ಛಬ್ಬಿ ಬಿಜೆಪಿ ಸೇರ್ಪಡೆಯಾಗಿ ಕಲಘಟಕಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದು ಸ್ಪರ್ಧೆಗಿಳಿಯುವ ತಯಾರಿಯಲ್ಲಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!