ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರ ಪಿಂಕ್ ಶೌಚಾಲಯ ಉದ್ಘಾಟಸುವ ಮೂಲಕ ಮಹಿಳಾ ಸ್ನೇಹಿ ಎನಿಸಿಕೊಂಡಿದೆ. ಮೈಸೂರಿನ ಡಿ.ದೇವರಾಜ ಅರಸು ರಸ್ತೆ ಬಳಿಯ ಚಾಮುಂಡಿ ಅತಿಥಿ ಗೃಹದ ಹಿಂಭಾಗದ ದಿವಾನರ ರಸ್ತೆಯಲ್ಲಿ ಈ ಶೌಚಾಲಯ ನಿರ್ಮಾಣಗೊಂಡಿದೆ.
ಮೈಸೂರು ಮಹಾನಗರ ಪಾಲಿಕೆಯ (ಎಂಸಿಸಿ) 14ನೇ ಹಣಕಾಸು ಯೋಜನೆಯಡಿ 37 ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಕಾಮಗಾರಿಗೆ ವರ್ಷದ ಹಿಂದೆ ಅಡಿಪಾಯ ಹಾಕಲಾಗಿತ್ತು. ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಕಾರ್ಪೊರೇಟರ್ ಪ್ರಮೀಳಾ ಜೆ.ಭರತ್ ಅವರೊಂದಿಗೆ ಶಾಸಕ ಎಲ್.ನಾಗೇಂದ್ರ ಅವರು ಪಿಂಕ್ ಟಾಯ್ಲೆಟ್ ಉದ್ಘಾಟಿಸಿದರು.
ಪ್ರತ್ಯೇಕವಾದ ಕಟ್ಟಡ ಹೊಂದಿರುವ ಈ ಮಹಿಳಾ ಶೌಚಾಲಯ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತೆ ಅನ್ನೋದು ವಿಶೇಷ.