ಬಾರ್ ಒಂದರಲ್ಲಿ ಕುಡಿಯುತ್ತಾ ಕುಳಿತ್ತಿದ್ದ ಗೆಳೆಯರ ನಡುವೆ ನಡೆದ ಹಾಸ್ಯಚಟಾಕಿಯೇ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ. ಕುಡಿತದ ಅಮಲಿನಲ್ಲಿ ಸ್ನೇಹಿತನ ಅಂಗೈ ರೇಖೆ ನೋಡಿ ಅಪಹಾಸ್ಯ ಮಾಡಿದ್ದೇ ಕೊಲೆಗೆ ಕಾರಣವಾಗಿದೆ.
ಗಾರೆ ಕೆಲಸ ಮಾಡಿಕೊಂಡಿದ್ದ ನರೇಶ್ ಮೃತವ್ಯಕ್ತಿ. ಈತನನ್ನು ಹತ್ಯೆಗೈದ ಮಾರಿಮುತ್ತು ಈಗ ಜೈಲುಪಾಲಾಗಿದ್ದಾನೆ. ಪರಿಚತರೇ ಆಗಿದ್ದ ಇಬ್ಬರೂ ಬಾರ್‍ನಲ್ಲಿ ಮದ್ಯ ಸೇವನೆಗೆ ಕುಳಿತಿದ್ದರು. ಈ ವೇಳೆ ಮಾರಿಮುತ್ತು ಅಂಗೈ ನೋಡಿ ಕೀಟಲೆಗಾಗಿ ಭವಿಷ್ಯ ಹೇಳಲು ಶುರು ಮಾಡಿದ ನರೇಶ್, ನಿನಗೆ ಹುಡುಗಿಯರ ಚಟದೊಂದಿಗೆ ಬೇರೆ ದುರಭ್ಯಾಸಗಳೂ ಇವೆ. ನೀನಿನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ಅಪಹಾಸ್ಯ ಮಾಡಿದ್ದ. ಇದರಿಂದ ರೊಚ್ಚಿಗಿದ್ದ ಮಾರಿಮುತ್ತು ನರೇಶ್ ನೊಂದಿಗೆ ಅಲ್ಲಿಯೇ ಜಗಳ ತೆಗೆದಿದ್ದ. ಬಾರ್ ನಿಂದ ಹೊರಬಂದೊಡನೆ ನರೇಶ್ ತಲೆಗೆ ಕಲ್ಲಿನಿಂದ ಹೊಡೆದು ಮಾರಿಮುತ್ತು ಹತ್ಯೆಗೈದಿದ್ದಾನೆ.
ಈ ಮುನ್ನವೇ ಮತ್ತೊಂದು ಕೊಲೆ ಪ್ರಕರಣದಲ್ಲಿ ಜೈಲು ಕಂಡು ಬಂದಿರುವ ಮಾರಿಮುತ್ತು ಮತ್ತೆ ಜೈಲು ಸೇರಿದ್ದಾನೆ.