Saturday, November 2, 2024
Homeಬೆಂಗಳೂರುಉದ್ಯಾನವನ ಕಾಮಗಾರಿ ನಿರ್ಮಾಣಕ್ಕೆ ತರಾತುರಿಯಲ್ಲಿ ಚಾಲನೆ

ಉದ್ಯಾನವನ ಕಾಮಗಾರಿ ನಿರ್ಮಾಣಕ್ಕೆ ತರಾತುರಿಯಲ್ಲಿ ಚಾಲನೆ

ಚುನಾವಣಾ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ತರಾರತುರಿಯಲ್ಲಿ ಎರಡು ಪ್ರಮುಖ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿರುವುದಾಗಿ ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಹೇಳಿದ್ದಾರೆ. ಜಾರಕಬಂಡೆ ಕಾವಲ್ ಉದ್ಯಾನವನ ಹಾಗೂ ಬೆಟ್ಟಹಲಸೂರಿನ ಉದ್ಯಾನವನದ ಕಾಮಗಾರಿಗೆ ಬುಧವಾರ ಬೆಳಗ್ಗೆ ಝೂಮ್ ಲೈವ್ ಮೂಲಕ ಕಂದಾಯ ಸಚಿವ ಅಶೋಕ್ ಅವರೊಡನೆ ಗುದ್ದಲಿ ಪೂಜೆ ನೆರವೇರಿಸಿರುವುದಾಗಿ ಮುನಿರತ್ನ ತಿಳಿಸಿದ್ದಾರೆ.
ಈ ಕುರಿತು ವಿಕಾಸಸೌಧದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಮುನಿರತ್ನ, ತೋಟಗಾರಿಕೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ಬಗ್ಗೆ ತೃಪ್ತಿಯಿದೆ. ಇದುವರೆಗೂ ಇಲಾಖೆಯಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದೇವೆ ಎಂದು ನುಡಿದರು. ಜೊತೆಗೆ ಲಾಲ್‍ಬಾಗ್ ರೀತಿಯಲ್ಲೇ ಎರಡು ದೊಡ್ಡ ಪಾರ್ಕ್‍ಗಳು ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, ಆ ಕಾಮಗಾರಿಗೆ ಚಾಲನೆ ನೀಡಿರುವ ಈ ದಿನ ಐತಿಹಾಸಿಕ ದಿನವಾಗಿದೆ ಎಂದು ಬಣ್ಣಿಸಿದರು. ಉದ್ಯಾನವನ ನಿರ್ಮಾಣಕ್ಕೆ ಸಂಬಂಧಿಸಿದ ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಹೆಚ್ಚಿನ ಸುದ್ದಿ

error: Content is protected !!