Wednesday, March 26, 2025
Homeಟಾಪ್ ನ್ಯೂಸ್ಮುನಿರತ್ನ ಒಬ್ಬ ಮುಟ್ಟಾಳ, ಒಕ್ಕಲಿಗರ ಹೆಣ್ಮಗಳಿಗೆ ಭಯ ಬಿದ್ದಿದ್ದಾನೆ: ಡಿಕೆ ಸುರೇಶ್‌

ಮುನಿರತ್ನ ಒಬ್ಬ ಮುಟ್ಟಾಳ, ಒಕ್ಕಲಿಗರ ಹೆಣ್ಮಗಳಿಗೆ ಭಯ ಬಿದ್ದಿದ್ದಾನೆ: ಡಿಕೆ ಸುರೇಶ್‌

ಮುನಿರತ್ನ ಒಬ್ಬ ಮುಟ್ಟಾಳ, ಹೆಣ್ಮಕ್ಕಳ ಮೇಲೆ ರೇಪ್‌ ಕೇಸ್‌, ಗಾಂಜಾ ಕೇಸ್‌ ಹಾಕಿ ರಾಜಕಾರಣ ಮಾಡಿದವನಲ್ಲ ನಾನು ಎಂದು ಡಿಕೆ ಸುರೇಶ್‌ ಮುನಿರತ್ನ ವಿರುದ್ಧ ಹರಿಹಾಯ್ದಿದ್ದಾರೆ.

ಆರ್‌ ಆರ್‌ ನಗರದಲ್ಲಿ ಯಾರೇ ಮತ ಕೇಳಿದ್ರೂ ಹೊಡೀರಿ ಅಂತ ಮುನಿರತ್ನ ಹೇಳಿದ್ದಾರೆ, ತಮಿಳಲ್ಲಿ ಪ್ರಚೋದನೆ ನೀಡಿದ್ದಾರೆ. ಡಿಕೆ ಸುರೇಶ್‌ ಬಂದ್ರೂ, ಕುಸುಮಾ ಬಂದ್ರೂ ಹೊಡೀರಿ ಅಂತ ಮುನಿರತ್ನ ಹೇಳಿದ್ದಾರೆ. ಒಕ್ಕಲಿಗರ ಹೆಣ್ಮಗಳ ಮೇಲೆ ಅಷ್ಟೊಂದು ಭಯ ಶುರು ಆಗಿರಬೇಕು ಎಂದು ಡಿಕೆ ಸುರೇಶ್‌ ಮುನಿರತ್ನ ವಿರುದ್ಧ ಹರಿ ಹಾಯ್ದಿದ್ದಾರೆ.

ಒಬ್ಬ ಮಂತ್ರಿ ಹೀಗೆ ಹೇಳಿದ್ದಾರೆ. ಯಾರೇ ಹೇಳಿದ್ರೂ ಇಷ್ಟೊತ್ತಿಗೆ ಅವರನ್ನು ಬಂಧಿಸಬೇಕಿತ್ತು, ಸರ್ಕಾರದ ಆದೇಶ ಇದೆ. ಆ ಕ್ಷೇತ್ರದಲ್ಲಿ ಏನೇನು ಅವ್ಯವಹಾರ ನಡೀತಿದೆ ಅನ್ನೋದು ಜನರಿಗೆ ಗೊತ್ತಿದೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.

ಇನ್ನು, ಮುನಿರತ್ನರ ಬೆದರಿಕೆ ಭಾಷಣವನ್ನು ಹಂಚಿಕೊಂಡಿರುವ ಆರ್‌ಆರ್‌ ನಗರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ, ಮುನಿರತ್ನ ಅವರು ಚುನಾವಣೆಯ ಸಮಯದಲ್ಲಿ ನೇರವಾಗಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಾರೆಂದರೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!