ಶಿಮ್ಲಾ: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಸಂಜೌಲಿ ಮಸೀದಿಯ ಅಕ್ರಮ ನಿರ್ಮಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಸೀದಿಯ ಮೇಲಿನ ಮೂರು ಅನಧಿಕೃತ ಮಹಡಿಗಳನ್ನು ಕೆಡವಬೇಕು ಎಂದು ಶಿಮ್ಲಾ ಮುನ್ಸಿಪಲ್ ಕಮಿಷನರ್ ಕೋರ್ಟ್ ಆದೇಶ ನೀಡಿದೆ.
ಸಂಜೌಲಿ ಮಸೀದಿಯ ಬಹು ಅಂತಸ್ತುಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು, ಇದನ್ನು ಕೆಡವಬೇಕು ಎಂದು ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಇದೀಗ ವಕ್ಫ್ ಬೋರ್ಡ್ ವೆಚ್ಚದಲ್ಲಿ ಇದನ್ನು ನೆಲಸಮ ಮಾಡಬೇಕು ಎಂದು ಶಿಮ್ಲಾ ಮುನ್ಸಿಪಲ್ ಆಯುಕ್ತರ ಕಚೇರಿ ಆದೇಶ ನೀಡಿದೆ.
ಇನ್ನು ಶಿಮ್ಲಾ ಮುನ್ಸಿಪಲ್ ಕಮಿಷನರ್ ಕೋರ್ಟ್ ಆದೇಶದ ಬಗ್ಗೆ ಸಂಜೌಲಿ ಮಸೀದಿ ಸಮಿತಿ ಅಧ್ಯಕ್ಷರು ಮಸೀದಿಯ ಮೂರು ಮಹಡಿಗಳನ್ನು ಕೆಡವುವ ತೀರ್ಪನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.