ಗದಗ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿದ್ದ ಅಂಗನವಾಡಿ (anganwadi) ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ವಿಷಾದನೀಯ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗಲವಾಡಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ರತ್ನಮ್ಮ ಬಳಿಗಾರ (43) ಮೃತಪಟ್ಟ ದುರ್ದೈವಿ. ಮೃತ ರತ್ನಮ್ಮ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, SIR ಹಿನ್ನೆಲೆ ರತ್ನಮ್ಮ BLO ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು.
ಇತ್ತೀಚೆಗೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಚಂದ್ರು ಲಮಾಣಿ ಅವರು ಬಾಗಲವಾಡಿ ಗ್ರಾಮಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಈ ಪ್ರಮುಖ ಸಭೆಯಲ್ಲಿ ರತ್ನಮ್ಮ ಅವರು ಕೂಡ ಭಾಗವಹಿಸಿದ್ದರು. ಆದರೆ, ಸಭೆ ಮುಗಿದ ಕೆಲವೇ ಸಮಯದ ಬಳಿಕ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ, ತೀವ್ರ ಹೃದಯಾಘಾತದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: PV SINDHU : ಜಪಾನ್ ಓಪನ್ ಜಯಿಸಿ ಇತಿಹಾಸ ಬರೆದ ಪಿ.ವಿ. ಸಿಂಧು ಸಾಧನೆಗೆ ಸಿಎಂ ಡಿಕೆಶಿ ಶ್ಲಾಘನೆ