Thursday, May 22, 2025
Homeಕ್ರೀಡೆWPL: ಪ್ಲೇ ಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ತಂಡ.

WPL: ಪ್ಲೇ ಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ತಂಡ.

 ನಾಯಕಿ ಹರ್ಮನ್ ಪ್ರೀತ್‍ಕೌರ್ ಅರ್ಧಶತಕ ಹಾಗೂ ನಾಟ್ ಸ್ಕಿವರ್ ಬ್ರಂಟ್ ಆಲ್‍ರೌಂಡರ್ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 55 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಗ್ರಸ್ಥಾನದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದೆ.

ಮಂಗಳವಾರ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತ್ತು. 163 ರನ್ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕಿ ಹರ್ಮನ್‍ಪ್ರೀತ್ ಕೌರ್ ಮತ್ತೊಮ್ಮೆ ಭರ್ಜರಿ ಅರ್ಧಶತಕ ಬಾರಿಸಿದರು. 30 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‍ಗಳೊಂದಿಗೆ 51 ರನ್ ಬಾರಿಸಿದರು. ಆರಂಭಿಕ ಬ್ಯಾಟರ್ ಯಸ್ತಿಕಾ ಭಾಟಿಯಾ 37 ಎಸೆತಗಳಲ್ಲಿ 44 ರನ್ ಹಾಗೂ ಅಮೇಲಿಯಾ ಕೆರ್ 19 ರನ್ ಗಳಿಸಿ ತಂಡದ ಮೊತ್ತ 160 ರನ್‍ಗಳ ಗಡಿ ದಾಟಲು ನೆರವಾದರು.

ತನ್ನ ಸರದಿ ಆರಂಭಿಸಿದ ಗುಜರಾತ್ ಜೈಂಟ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸೋಫಿಯಾ ಡಂಕ್ಲೆ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ತಂಡಕ್ಕೆ ಆಘಾತ ನೀಡಿದರು. ನಂತರ ಕಣಕ್ಕಿಳಿದವರಲ್ಲಿ ಸಬ್ಬಿನೇನಿ ಮೇಘನಾ 16 ರನ್, ಹರ್ಲೀನ್ ಡಿಯೋಲ್ 22 ರನ್, ಸ್ನೇಹ ರಾಣಾ 20 ರನ್ ಹಾಗೂ ಸುಷ್ಮಾ ವರ್ಮಾ 18 ರನ್ ಗಳಿಸಿದರು. ಅಗ್ರಕ್ರಮಾಂಕದ ಬ್ಯಾಟರ್‍ಗಳ ಕಳಪೆ ಪ್ರದರ್ಶನದಿಂದಾಗಿ ತಂಡ ಸೋಲೊಪ್ಪಿಕೊಂಡಿತು.

ಅಂತಿಮವಾಗಿ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್‍ಗಳಷ್ಟೇ ಗಳಿಸಿ ಸೋಲನುಭವಿಸಿತು.

ಹೆಚ್ಚಿನ ಸುದ್ದಿ

error: Content is protected !!