ಬೆಂ. ಗ್ರಾಮಾಂತರ: ಈ ಬಾರಿ ನನಗೆ ಟಿಕೆಟ್ ಬೇಡ. ಆದರೆ ನನ್ನ ಮಗ ನಿತಿನ್ ಪುರುಷೋತ್ತಮ್ ಗೆ ಟಿಕೆಟ್ ಕೊಡುವಂತೆ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹೊಸಕೋಟೆಯಲ್ಲಿ ಮಾತ್ರವಲ್ಲ ಬೇರೆಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ತಮ್ಮ ರಾಜಕೀಯ ವಿಶ್ರಾಂತಿಯ ಸೂಚನೆ ನೀಡಿದ್ದಾರೆ.
ನನ್ನ ಮಗನಿಗೆ ಟಿಕೆಟ್ ನೀಡಿದರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ. ಅವನೂ ಸಹ ಗೆಲ್ಲುವ ಛಾತಿ ಹೊಂದಿದ್ದಾನೆ. ಹೀಗಾಗಿ ನನ್ನ ಮಗನಿಗೇ ಟಿಕೆಟ್ ನೀಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ, ಹಾಗೂ ಬಿಜೆಪಿ ಕೋರ್ ಕಮಿಟಿಯಲ್ಲಿ ಮನವಿ ಸಲ್ಲಿಸಿದ್ದೇನೆ. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರಲ್ಲಿಯೂ ಈ ಬಗ್ಗೆ ಚರ್ಚಿಸಿದ್ದೇನೆ ಎಂದರು. ಹಾಗೆಯೇ ರಾಜ್ಯಾದ್ಯಂತ ಕುರುಬ ಸಮುದಾಯಕ್ಕೆ ಎಂಟು ಟಿಕೆಟ್ ನೀಡಲು ಬೇಡಿಕೆ ಸಲ್ಲಿಸಲಾಗಿದೆ ಎಂದು ಎಂಟಿಬಿ ನಾಗರಾಜ್ ಇದೇ ವೇಳೆ ಹೇಳಿದ್ದಾರೆ.