ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಯಾರು ಮಾಡಿಸಿದ್ರು ಅನ್ನೋ ಕ್ರೆಡಿಟ್ ವಾರ್ ತಣ್ಣಗಾಯ್ತು.. ಆದ್ರೆ ಎಲ್ಲಾ ಕ್ರೆಡಿಟ್ಟೂ ನನಗೇ ಬರಬೇಕು ಎಂದು ಇನ್ನಿಲ್ಲದ ಹರಸಾಹಸ ಪಟ್ಟ ಸಂಸದ ಪ್ರತಾಪ್ ಸಿಂಹ ಈಗ ಪೇಚಿಗೆ ಸಿಲುಕಿದ್ದಾರೆ.
ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆಯ ಟಾರ್ ಕಿತ್ತು ಬಂದಿದೆ. ಸದ್ಯ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅರ್ಧಭಾಗದಲ್ಲಿ ವಾಹನಗಳು ಓಡಾಡದಂತೆ ಬ್ಯಾರಿಕೇಡ್ ಹಾಕಲಾಗಿದೆ.ಈ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆಯೇ ಸಂಸದ ಪ್ರತಾಪ್ ಸಿಂಹ ಫೋಟೋ ಒಂದನ್ನು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಹಾಕಿದ್ದರು..
ಆದ್ರೆ ಸಂಸದ ಪ್ರತಾಪ್ ಸಿಂಹರವರು ಯಾವುದೋ ಬೇರೆ ಫೋಟೊ ತೋರಿಸಿ, ರಸ್ತೆ ಸರಿಯಾಗಿತ್ತು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಹಾಗೂ ಕಾಂಗ್ರೆಸ್ ಪಕ್ಷ ತರಾಟೆಗೆ ತೆಗೆದುಕೊಂಡಿದೆ. ಒಂದು ವೇಳೆ ನ್ಯೂನತೆ ಇದ್ದರೆ, ಅದನ್ನು ಸರಿಪಡಿಸಿದ ಮೇಲೆ ರಸ್ತೆ ಉದ್ಘಾಟನೆ ಮಾಡಬಹುದಿತ್ತಲ್ಲವೇ ಎಂದು ಟೀಕಿಸಿದೆ.
ಇನ್ನು ಫೋಟೋ ರಿವರ್ಸ್ ಚೆಕ್ ಮಾಡಿ ನೋಡಿದಾಗ ಪ್ರತಾಪ್ ಸಿಂಹರವರು ಹಂಚಿಕೊಂಡಿರುವ ಫೋಟೊ ಅಕ್ಟೋಬರ್ 05, 2017ರಲ್ಲಿಯೇ C for Civil ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿರುವುದು ಬಯಲಾಗಿದೆ. ಇದರಿಂದ ಹಳೆ ಫೋಟೋ ತೋರಿಸಿ ದಶಪಥ ರಸ್ತೆ ಏನೂ ಆಗಿಲ್ಲ ಎಂದು ಹೇಳು ಮೂಲಕ ಸಂಸದ ಪ್ರತಾಪ್ ಸಿಂಹ ಜನರ ಕಿವಿ ಮೇಲೆ ಹೂ ಇಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗ್ತಿದೆ.