Monday, November 4, 2024
Homeಟಾಪ್ ನ್ಯೂಸ್ಇದು 40% ಅಲ್ಲ 200% ಲೂಟಿ ಸರ್ಕಾರ :  ಬಿಜೆಪಿ ವಿರುದ್ಧ ಡಿಕೆ ಸುರೇಶ್...

ಇದು 40% ಅಲ್ಲ 200% ಲೂಟಿ ಸರ್ಕಾರ :  ಬಿಜೆಪಿ ವಿರುದ್ಧ ಡಿಕೆ ಸುರೇಶ್ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ರಾಜ್ಯಪ್ರವಾಸದ ಹೆಸರಲ್ಲಿ ಸಖತ್‌ ಡೀಲ್ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್‌ ಆರೋಪಿಸಿದ್ರು. ಸರ್ಕಾರದಿಂದ ಕರ್ನಾಟಕದಲ್ಲಿ ಮೋದಿ ಟೂರ್ ಡೀಲ್ ನಡೆಯುತ್ತಿದೆ. 40 ಪರ್ಸೆಂಟ್ ಅಲ್ಲ, 200 ಪರ್ಸೆಂಟ್ ಡೀಲ್ ನಡೆಯುತ್ತಿದೆ ಎಂದು ಆರೋಪಿಸಿದ್ರು

ಬಿಜೆಪಿಯವರು ವಿಮಾನ ನಿಲ್ದಾಣ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಮಾಡಿ ಕೆಂಪೇಗೌಡರ ಹೆಸರಲ್ಲೂ ಡೀಲ್ ಮಾಡಿದ್ದಾರೆ. ಇದರಲ್ಲಿ40% ಅಲ್ಲ 200% ಡೀಲ್ ನಡೆದಿದೆ. ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ 30 ಕೋಟಿ ಖರ್ಚು ಮಾಡಿದ್ದಾರೆ. ಏರ್ ಪೋರ್ಟ್ ರಸ್ತೆ ಕಾಮಗಾರಿ ಸರ್ಕಾರದ ವ್ಯಾಪ್ತಿಗೆ ಬರದಿದ್ರೂ 8.36 ಕೋಟಿ ಖರ್ಚು ದುರಸ್ತಿ ಮಾಡಿದ್ದೇವೆ ಎಂದು ಹೇಳಿರುವ ಬಿಜೆಪಿ ಹಣ ನುಂಗಿದೆ ಎಂದು ಸುರೇಶ್‌ ಆರೋಪಿಸಿದ್ರು.

 ಏರ್ ಪೋರ್ಟ್ ರಸ್ತೆ ಗುಂಡಿ ಬಿದ್ದಿತ್ತಾ? ರಿಪೇರಿ ಎಲ್ಲಿ ಬಂತು? ಪ್ರಧಾನಿ ಮೋದಿ ಕಾರ್ಯಕ್ರಮದ ಪೆಂಡಾಲ್​ಗೆ 12 ಕೋಟಿ ಖರ್ಚು ಮಾಡಿದ್ದಾರೆ. 12 ಕೋಟಿ ಹಣದಲ್ಲಿ ಎರಡು ಸೆಟ್ ಪೆಂಡಾಲ್ ಖರೀದಿ ಮಾಡಬಹುದಿತ್ತು. 12 ಕೋಟಿಯಲ್ಲಿ ಚಿನ್ನದ ಕಾರ್ಪೆಟ್ ಹಾಕಿಸಬಹುದಿತ್ತು. ಬಂದ ಜನರಿಗೆ ನೀರು ಕೊಡಲು 1 ಕೋಟಿ ಖರ್ಚು ತೋರಿಸಿದ್ದಾರೆ. ಒಬ್ಬೊಬ್ಬ ಎಷ್ಟೆಷ್ಟು ಲೀಟರ್ ನೀರು ಕುಡಿದಿದ್ದಾರೆ ಲೆಕ್ಕ ಇದೆಯಾ ಎಂದು ಪ್ರಶ್ನಿಸಿದ್ರು

ಕರ್ನಾಟಕದ ಕನ್ನಡಿಗರ ದುಡ್ಡನ್ನು ಮೋದಿ ಹೆಸರಲ್ಲಿ ಚುನಾವಣಾ ಸಂದರ್ಭದಲ್ಲಿ ದಂಡಯಾತ್ರೆಗೆ ಬಳಕೆ ಮಾಡುತ್ತಿದ್ದಾರೆ. ಒಂದು ಬಾರಿ ಬಂದಾಗಲೇ ಇಷ್ಟು ಲೂಟಿ ಮಾಡಿದ್ದಾರೆ. ಕಿಚನ್ ಸೆಟಪ್ ಮಾಡುವುದಕ್ಕೆ 50 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 77 ಲಕ್ಷ ಖರ್ಚು ಮಾಡಿದ್ದಾರೆ. ಇದು ಬಿಜೆಪಿಯ ಭರವಸೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಉರಿಗೌಡ ನಂಜೇಗೌಡ ಇಟ್ಟುಕೊಂಡು ಒಕ್ಕಲಿಗರನ್ನು ಕೊಲೆಗಡುಕರೆಂದು ಮಾಡಿದವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡುತ್ತಲೇ ಕಿಡಿ ಕಾರಿದ್ರು.

ಇನ್ನು ದಾವಣಗೆರೆಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ ಹೆಸರಲ್ಲಿ, ಅಮಿತ್ ಶಾ ಹೆಸರಲ್ಲಿ ಎಷ್ಟು ಲೂಟಿ ಹೊಡೆದಿದ್ದಾರೋ ಗೊತ್ತಿಲ್ಲ. ಇದುವರೆಗೂ ಮೋದಿ 7ಬಾರಿ ರಾಜ್ಯಕ್ಕೆ ಬಂದಿದ್ದಾರೆ ಅಂದರೆ ಎಷ್ಟು ಹಣಲೂಟಿ ಮಾಡಿರಬಹುದು ಎಂದು ಅಂದಾಜಿಸಿ ಎಂದಿದ್ದಾರೆ ಸಂಸದ ಡಿ.ಕೆ ಸುರೇಶ್

ಹೆಚ್ಚಿನ ಸುದ್ದಿ

error: Content is protected !!