ಬೆಂಗಳೂರು: ದುಬಾರಿ ಟೋಲ್ ಕಟ್ಟಬೇಕು.. ಆದರೆ ಈ ರಸ್ತೆಯೇ ಸರಿ ಇಲ್ಲ.. ಇದು ಬೆಂಗಳೂರು ಮೈಸೂರು ಹೆದ್ದಾರಿಯ ಕಥೆ. ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಬಿಂಬಿತವಾಗಿರವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಶುಕ್ರವಾರ ಸುರಿದ ಸಣ್ಣ ಮಳೆಗೆ ಜಲಾವೃತಗೊಂಡಿದೆ.
ಶುಕ್ರವಾದ ಸಂಜೆ ಬೆಂಗಳೂರು ಮೈಸೂರು ಸೇರಿದಂತೆ ಹಲವೆಡೆ ಮಳೆಯಾಗಿತ್ತು. ಬರುಬೇಸಿಗೆಯಲ್ಲಿ ವರುಣ ತಂಪೆರೆದ ಅನ್ನೋ ಸಂತಸ ಒಂದೆಡೆಯಾದ್ರೆ ಇತ್ತ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ ಎಂದೇ ಪ್ರಚಾರ ಪಡೆದಿದ್ದ ರಸ್ತೆಯಲ್ಲಿ ನೀರು ಹರಿಯದೇ ನಿಂತಿದ್ದು ವಾಹನ ಸವಾರರಿಗೆ ಸಮಸ್ಯೆ ಉಂಟುಮಾಡ್ತು.
ದುಬಾರಿ ಟೋಲ್ ಶುಲ್ಕ ನೀಡಿದ್ರೂ ರಸ್ತೆ ಸರಿ ಇಲ್ಲ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ರು. ರಾಮನಗರ ಸಮೀಪದ ಸಂಗಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತಗೊಂಡಿದ್ದರ ಪರಿಣಾಮ ಮಳೆ ನೀರಿಗೆ ಕೆಲ ವಾಹನಗಳು ರಸ್ತೆಯಲ್ಲಿಯೇ ಕೆಟ್ಟು ನಿಲ್ಲುವಂತಾಯ್ತು. ಇದರಿಂದ ಸಂಚಾರ ನಿಧಾನಗತಿಯಲ್ಲಿ ಸಾಗುವಂತಾಯ್ತು.
ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ. ಇಷ್ಟು ಸಣ್ಣ ಮಳೆಗೆ ಹೆದ್ದಾರಿಯ ಸ್ಥಿತಿ ಹೀಗಾದ್ರೆ ಮಳೆಗಾಲದಲ್ಲಿ ರಸ್ತೆಯ ಪರಿಸ್ಥಿತಿ ಏನು ಅನ್ನೋದು ಜನರ ಪ್ರಶ್ನೆ.