ಬೆಳಗಾವಿ : ಕೊಳದಲ್ಲಿ ಬಿದ್ದು ತಾಯಿ ಹಾಗೂ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹಿಂಡಲಗಾ ಗಣಪತಿ ದೇವಸ್ಥಾನ ಬಳಿ ನಡೆದಿದ್ದು, ಹಬ್ಬದ ದಿನವೇ ಘೋರ ದುರಂತವೊಂದು ನಡೆದುಹೋಗಿದೆ.
ತಡರಾತ್ರಿ ಗಣಪತಿ ದೇವಸ್ಥಾನದ ಮುಂಭಾಗ ಇರುವ ಗಣಪತಿ ಕೊಳಕ್ಕೆ ಹಾರಿ ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರ ಶವಗಳು ಇಂದು ತೇಲಿವೆ.
ಕವಿತಾ ಬಸವಂತ ಜುನೇಬೆಳಗಾಂವಕರ್ ಹಾಗೂ ಪುತ್ರ ಸಮರ್ಥ ಬಸವಂತ ಮೃತ ದುರ್ದೈವಿಗಳಾಗಿದ್ದು, ಆತ್ಮಹತ್ಯೆಗೆ ನಿಖಿರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.