Saturday, January 25, 2025
Homeಟಾಪ್ ನ್ಯೂಸ್ಒಂದೇ ಕುಟುಂಬದ 6 ಜನರ ಸಾವಿಗೆ ಕಾರಣವಾದ ಸೊಳ್ಳೆ ಬತ್ತಿ!

ಒಂದೇ ಕುಟುಂಬದ 6 ಜನರ ಸಾವಿಗೆ ಕಾರಣವಾದ ಸೊಳ್ಳೆ ಬತ್ತಿ!

ನವದೆಹಲಿ: ಸೊಳ್ಳೆ ಬತ್ತಿಯಿಂದಾದ ಅವಘಡದಿಂದ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ನಡೆದಿದೆ.

ರಾತ್ರಿ ಮಲಗುವಾಗ ಉರಿಸಿದ್ದ ಸೊಳ್ಳೆ ಬತ್ತಿ ಬಟ್ಟೆಯ ಮೇಲೆ ಬಿದ್ದಿದ್ದೇ ಇದಕ್ಕೆ‌ ಕಾರಣ ಎನ್ನಲಾಗಿದೆ. ಬಟ್ಟೆ ಹೊತ್ತಿ ಉರಿದಾಗ ಮನೆಯಿಡೀ ತುಂಬಿದ್ದ ವಿಷಮಿಶ್ರಿತ ಗಾಳಿ ಸೇವಿಸಿ ಈ ಕುಟುಂಬದ ಸದಸ್ಯರು ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಬೆಂಕಿ ಹೊತ್ತಿ ಉರಿದಾಗ ಬಿಡುಗಡೆಯಾದ ಕಾರ್ಬನ್ ಮೊನಾಕ್ಸೈಡ್ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಮೃತಪಟ್ಟ 6 ಜನರಲ್ಲಿ 4 ಮಂದಿ ಪುರುಷರು, ಒಬ್ಬ ಮಹಿಳೆ ಮತ್ತೊಂದು ಮಗು ಸೇರಿದೆ.

ಹೆಚ್ಚಿನ ಸುದ್ದಿ

error: Content is protected !!