Thursday, March 12, 2026
Homeಟಾಪ್ ನ್ಯೂಸ್MOHAN BHAGWAT: ‘ಬಾಂಗ್ಲಾದ 1.25 ಕೋಟಿ ಹಿಂದೂಗಳು ಸಿಡಿದೆದ್ದರೆ..’ ಖಡಕ್ ಸಂದೇಶ ಕೊಟ್ಟ ಭಾಗವತ್

MOHAN BHAGWAT: ‘ಬಾಂಗ್ಲಾದ 1.25 ಕೋಟಿ ಹಿಂದೂಗಳು ಸಿಡಿದೆದ್ದರೆ..’ ಖಡಕ್ ಸಂದೇಶ ಕೊಟ್ಟ ಭಾಗವತ್

ಮುಂಬೈ : ಜಗತ್ತಿನಲ್ಲಿ ಒಂದೇ ಒಂದು ಹಿಂದೂ ರಾಷ್ಟ್ರ ಇಲ್ಲ. ಎಲ್ಲೇ ಹಿಂದೂಗಳು (Hindus) ಸಂಕಷ್ಟಕ್ಕೆ ಸಿಲುಕಿದರೂ ಅವ್ರಿಗೆ ಸಹಾಯ ಮಾಡುವವರಿಲ್ಲ. ಆದ್ದರಿಂದ ಹಿಂದೂಗಳಿಗೆ RSS ಒಂದು ಖಡಕ್ ಸಂದೇಶ ನೀಡಿದೆ.ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳು ಸಂಕಷ್ಟದಲ್ಲಿದ್ದಾರೆ. ಆದರೆ, ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದೂಗಳಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ನಿಂತರೆ, ಜಗತ್ತಿನಾದ್ಯಂತ ಎಲ್ಲಾ ಹಿಂದುಗಳು ಬೆಂಬಲಿಸುತ್ತಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

‘ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದೂಗಳಿದ್ದಾರೆ. ಅವರು ಅಲ್ಲಿಯೇ ಇದ್ದು ಹೋರಾಡಲು ನಿರ್ಧರಿಸಿದರೆ, ಅಲ್ಲಿನ ರಾಜಕೀಯವನ್ನು ತಮ್ಮ ಸುರಕ್ಷತೆಗಾಗಿ ಬಳಸಿಕೊಂಡರೆ. ಅವ್ರು ಒಂದಾಗಬೇಕು. ಈ ಸಲ ಅವ್ರು ನಿರ್ಧರಿಸಿದ್ದಾರೆ. ಇಲ್ಲೇ ಇದ್ದು ಹೋರಾಡಬೇಕು ಎಂದು ನಿರ್ಧರಿಸಿದ್ದಾರೆ’ ಎಂದು ಭಾಗವತ್ ಹೇಳಿದ್ರು.

ಇದನ್ನೂ ಓದಿ : ಭಾರತದಲ್ಲಿ ವಾಸ ಮಾಡುವ ಎಲ್ಲರೂ ಹಿಂದೂಗಳು! RSS ಮುಖ್ಯಸ್ಥ ಮೋಹನ್ ಭಾಗವತ್

ಅಕ್ರಮ ವಲಸೆಯೇ ಕಾರಣ :

ದೇಶೀಯ ಸಮಸ್ಯೆಗಳ ಕುರಿತು, ಮೋಹನ್ ಭಾಗವತ್ ಪ್ರಸ್ತಾಪಿಸುತ್ತಾ, ಹಿಂದಿನ ಸರ್ಕಾರಗಳು ಭಾರತದಲ್ಲಿ ಬದಲಾಗುತ್ತಿರುವ ಜನಸಂಖ್ಯಾ ಚಲನಶೀಲತೆಯನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿಲ್ಲ. ಜನನ ದರಗಳು ಮತ್ತು ಅಕ್ರಮ ವಲಸೆಯೇ ಈ ಬದಲಾವಣೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಉಲ್ಲೇಖಿಸಿದ್ದಾರೆ.ಭಾರತವನ್ನು ಇನ್ನು ಮುಂದೆ ದುರ್ಬಲಗೊಳಿಸಲು ಸಾಧ್ಯವಿಲ್ಲ . ಭಾರತವನ್ನು ಮುರಿಯಲು ಪ್ರಯತ್ನಿಸುವವರು ಮುರಿಯಲ್ಪಡುತ್ತಾರೆ” ಎಂದು ಹೇಳಿದರು.

‘ವೀರ್ ಸಾವರ್ಕರ್​ಗೆ ಭಾರತರತ್ನ ಸಿಗಲೇಬೇಕು’
‘ಸ್ವಾತಂತ್ರ್ಯ ವೀರ ಸಾವರ್ಕರ್​ಗೆ ಭಾರತರತ್ನ ಸಿಕ್ಕಿದ್ಯೋ ಇಲ್ವೋ ಅನ್ನೋದು ವಿಷಯವಲ್ಲ. ಭಾರತರತ್ನ ಸಿಕ್ಕರೆ ಆ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ. ಆ ಪ್ರಶಸ್ತಿ ಸಿಗದಿದ್ದರೂ ಅವ್ರು ಲಕ್ಷ ಲಕ್ಷ.. ಕೋಟಿ ಕೋಟಿ ಹೃದಯ ಸಾಮ್ರಾಟರಾಗಿದ್ದಾರೆ’ ಎಂದು ಭಾಗವತ್ ಹೇಳಿದ್ರು.

‘ಸುಲ್ತಾನರು, ಬ್ರಿಟಿಷರು ಬಂದ್ರೂ ಧರ್ಮ ಉಳಿದಿದೆ’
‘500 ವರ್ಷಗಳ ಕಾಲ ಬಾದ್​ಶಾ, ಸುಲ್ತಾನರು ಇಲ್ಲಿದ್ದು ಮಾಡಲಾಗದ್ದನ್ನು, 200 ವರ್ಷಗಳ ಕಾಲ ಬ್ರಿಟಿಷರು ಮಾಡಲಾಗದ್ದನ್ನು ಸ್ವಾತಂತ್ರ ಭಾರತದಲ್ಲಿ ಆಗುತ್ತಾ? ನಾವು ತುಂಬಾ ಮುಂದುವರೆದಿದ್ದೇವೆ’ ಎಂದು ಭಾಗವತ್ ಹೇಳಿದರು.

ಸಂಘವು ಯಾರ ವಿರುದ್ಧವೂ ಅಲ್ಲ
ನಾಯಕತ್ವ ಮತ್ತು ಜಾತಿಯ ಬಗ್ಗೆ ಮಾತನಾಡುತ್ತಾ ಭಾಗವತ್, ಆರ್‌ಎಸ್‌ಎಸ್ ತಾರತಮ್ಯ ಮಾಡುವುದಿಲ್ಲ. ಯಾವುದೇ ಜಾತಿಯ ಯಾರಾದರೂ ಆರ್‌ಎಸ್‌ಎಸ್ ಮುಖ್ಯಸ್ಥರಾಗಬಹುದು. ಎಸ್‌ಸಿ-ಎಸ್‌ಟಿ ಅನರ್ಹತೆ ಅಲ್ಲ ಮತ್ತು ಬ್ರಾಹ್ಮಣ ಅರ್ಹತೆಯೂ ಅಲ್ಲ. ಆರ್‌ಎಸ್‌ಎಸ್ ಆರಂಭದಲ್ಲಿ ಬ್ರಾಹ್ಮಣರೊಂದಿಗೆ ಪ್ರಾರಂಭವಾದರೂ, ನಾವು ಎಲ್ಲಾ ಜಾತಿಗಳಿಗಾಗಿ ಕೆಲಸ ಮಾಡುತ್ತೇವೆ” ಎಂದು ಸಮರ್ಥನೆ ನೀಡಿದರು.

RSS ಕಾರ್ಯಕ್ರಮಕ್ಕೆ ಆಹ್ವಾನಿತರು:

ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿರ್ ಖಾನ್​ಗೆ ಆಹ್ವಾನವಿತ್ತು. ಜಾಕಿ ಶ್ರಾಫ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್​ರನ್ನೂ ಕರೆಯಲಾಗಿತ್ತು. ಕರಣ್ ಜೋಹರ್, ಶಿಲ್ಪಾ ಶೆಟ್ಟಿ, ವಿಕ್ಕಿ ಕೌಶಲ್ ಕೂಡಾ ಕಾರ್ಯಕ್ರಮಕ್ಕೆ ಬಂದಿದ್ರು.

‘RSSನ ಈ ಯಾತ್ರೆಗೆ 100 ವರ್ಷ ತುಂಬಿದ್ದಕ್ಕೆ ಶುಭ ಕೋರುವೆ. ಇಂದು ನನಗೆ ಮೋಹನ್ ಜೀ ಮಾತು ಕೇಳುವ ಸೌಭಾಗ್ಯ ಸಿಕ್ಕಿತು. ಅವರನ್ನು ಭೇಟಿಯಾದೆ. ಅವರ ಮಾತಿನಿಂದ ಪ್ರಭಾವಿತನಾಗಿದ್ದೇನೆ’ ಎಂದು ನಟ ವಿಕ್ಕಿ ಕೌಶಲ್ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!