ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಹಾಗೂ ಎಎಪಿ ನಡುವೆ ಪೋಸ್ಟರ್ ವಾರ್ ನಡೆಯುತ್ತಿದೆ. ಮೋದಿ ಹಠಾವೋ ದೇಶ್ ಬಚಾವೋ (ಮೋದಿಯನ್ನು ತೊಲಗಿಸಿ, ದೇಶವನ್ನು ಉಳಿಸಿ) ಎಂದು ಪೋಸ್ಟರ್ ಹಾಕಿದವರನ್ನು ಬಂಧಿಸಿದ ಬಳಿಕ ಇದೀಗ “ಕೇಜ್ರಿವಾಲ್ ಹಠಾವೋ ದಿಲ್ಲಿ ಬಚಾವೋʼ ಪೋಸ್ಟರ್ ದೆಹಲಿಯಲ್ಲಿ ರಾರಾಜಿಸತೊಡಗಿವೆ.
ಮೋದಿ ವಿರೋಧಿ ಪೋಸ್ಟರ್ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು, ಬೃಹತ್ ಕಾರ್ಯಾಚರಣೆ ನಡೆಸಿ, ಮೋದಿ ವಿರುದ್ಧದ ಸಾವಿರಾರು ಪೋಸ್ಟರ್‌ಗಳನ್ನು ವಶಕ್ಕೆ ಪಡಿಸಿಕೊಂಡಿದ್ದರು. ನಂತರ ಪ್ರಿಂಟಿಂಗ್ ಪ್ರೆಸ್‌ನ ಇಬ್ಬರು ಮಾಲೀಕರು ಸೇರಿದಂತೆ ಆರು ಜನರನ್ನು ಬಂಧಿಸಿದ್ದು, ನೂರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ತನ್ನ ವಿರುದ್ಧ ಪೋಸ್ಟರ್ ರಾರಾಜಿಸತೊಡಗಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಸಿಎಂ ಕೇಜ್ರಿವಾಲ್, “ಈ (ಬಿಜೆಪಿ) ಜನರು ದೆಹಲಿಯಲ್ಲಿ ನನ್ನ ವಿರುದ್ಧ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಇದಕ್ಕೆ ನನ್ನ ಅಭ್ಯಂತರವಿಲ್ಲ. ಪ್ರಜಾಪ್ರಭುತ್ವದಲ್ಲಿ, ಸಾರ್ವಜನಿಕರಿಗೆ ತಮ್ಮ ನಾಯಕನ ಪರವಾಗಿ ಅಥವಾ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಲ್ಲಾ ಹಕ್ಕುಗಳಿವೆ. ನನ್ನ ವಿರುದ್ಧ ಪೋಸ್ಟರ್ ಹಾಕುವವರನ್ನು ಬಂಧಿಸಬಾರದು” ಎಂದು ಟ್ವೀಟ್ ಮಾಡಿದ್ದಾರೆ.
https://navasamaja.com/6-arrested-for-putting-up-objectionable-posters-against-pm-modi/