ನಾಳೆ ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಬಿಜೆಪಿಯ ಮಹಾಸಂಗಮಕ್ಕೆ ಬೆಣ್ಣೆನಗರಿ ಸಾಕ್ಷಿಯಾಗಲಿದೆ. ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಂದಿ ಸೇರುವ ಈ ಮಹಾಸಂಗಮದಲ್ಲಿ ಬಾಯ್ತುಂಬಾ ಸಿಹಿ, ಹೊಟ್ಟೆ ತುಂಬಾ ಅನ್ನ ನೀಡಲು ಬಿಜೆಪಿ ಸಜ್ಜಾಗಿದೆ. ಹಾಗಾಗಿಯೇ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಭರ್ಜರಿ ಮೆನು ತಯಾರಾಗಿದೆ.
ಬೆಳಗಿನ ತಿಂಡಿಗೆ ಚೌಚೌ ಭಾತ್ ಮತ್ತು ಮಧ್ಯಾಹ್ನದ ಊಟಕ್ಕೆ ಪಾಯಸ, ಅನ್ನ-ಸಾಂಬಾರು, ಪಲ್ಯಗಳು, ಮೊಸರನ್ನ ಜೊತೆ ಹಪ್ಪಳಗಳ ತಯಾರಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಅಡುಗೆಗೆಂದೇ ಒಂದು ಸಾವಿರ ಬಾಣಸಿಗರನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.
ಅಡುಗೆ ತಯಾರಿಸಲೆಂದೇ ಸಾವಿರ ಬಾಣಸಿಗರನ್ನು ನೇಮಿಸಲಾಗಿದ್ದು, ಅಡುಗೆ ಬಡಿಸಲೆಂದೇ 400 ಫುಡ್ ಕೌಂಟರ್ ಗಳನ್ನು ತೆರೆಯಲಾಗಿದೆ. ಲಕ್ಷಾಂತರ ಮಂದಿ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಆಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮುಜುಗರ ಆಗಬಾರದೆಂದು ಪಕ್ಷ ವಿಶೇಷ ಮುತುವರ್ಜಿ ವಹಿಸಿದೆ.