ಬೆಂಗಳೂರು: ಬಂಡೀಪುರ ಹುಲಿ ಯೋಜನೆಯ 50ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ. ಆದರೆ ತಮ್ಮ ಸಫಾರಿಯುದ್ದಕ್ಕೂ ಯಾವುದೇ ಹುಲಿ ಪ್ರಧಾನಿ ಅವರ ಕಣ್ಣಿಗೆ ಬಿದ್ದಿಲ್ಲ ಎನ್ನಲಾಗಿದೆ.
ಸುಮಾರು 2 ಗಂಟೆಗಳ ಕಾಲ ಜೀಪ್ ನಲ್ಲಿ ಸಫಾರಿ ನಡೆಸಿದ ಪ್ರಧಾನಿ ಮೋದಿ ಬಂಡೀಪುರ ಸಂರಕ್ಷಿತ ಪ್ರದೇಶದ ಉದ್ದಕ್ಕೂ ಸಂಚರಿಸಿದರು. ಈ ಸಂದರ್ಭ ಹಲವು ಪ್ರಾಣಿ ಪಕ್ಷಿಗಳನ್ನು ಅವರು ವೀಕ್ಷಿಸಿದರು. ಆದರೆ 22 ಕಿಲೋಮೀಟರ್ ಗಳ ಸಫಾರಿಯುದ್ದಕ್ಕೂ ಹುಲಿ ಅವರ ಕಣ್ಣಿಗೆ ಬಿದ್ದಿಲ್ಲ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ, ” ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ.. ಅಯ್ಯೋ ಪಾಪ….!! ಇನ್ನು ಕೆಲವೇ ದಿನಗಳಲ್ಲಿ #SaveBandipur ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ.. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೇಂದ್ರ ಮೋದಿ ಜೀ” ಎಂದಿದ್ದಾರೆ.