Wednesday, November 13, 2024
Homeಚುನಾವಣೆ 2023ಶಾಸಕಿ ಸೌಮ್ಯಾರೆಡ್ಡಿ ಕಾರು ಸೀಜ್​ ಪ್ರಕರಣ: ಕಾರು ಚಾಲಕನ ವಿರುದ್ದ ಎಫ್ ಐಆರ್

ಶಾಸಕಿ ಸೌಮ್ಯಾರೆಡ್ಡಿ ಕಾರು ಸೀಜ್​ ಪ್ರಕರಣ: ಕಾರು ಚಾಲಕನ ವಿರುದ್ದ ಎಫ್ ಐಆರ್

ಬೆಂಗಳೂರು: ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಕಾರು ಸೀಜ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲೈಯಿಂಗ್​ ಸ್ಕ್ವಾಡ್​​ ನೀಡಿದ ದೂರು ಆಧರಿಸಿ ಕಾರು ಚಾಲಕ ರಾಮಚಂದ್ರಪ್ಪ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.

ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಇನೋವಾ ಕಾರನ್ನು ಏಪ್ರಿಲ್ 6ರಂದು ಮಾರೇನಹಳ್ಳಿ ಚೆಕ್​ಪೋಸ್ಟ್​ ಬಳಿ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ತಿಲಕನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ಮತದಾರರಿಗೆ ಹಂಚಲು 2 ಲಕ್ಷ ಮೌಲ್ಯದ ಸೀರೆಗಳು, ಮೊಬೈಲ್​ ಸೇರಿ ಇತರೆ ವಸ್ತುಗಳನ್ನ ಸೀಜ್​ ಮಾಡಲಾಗಿತ್ತು. ವಿಚಾರಣೆ ವೇಳೆ ಈ ವಸ್ತುಗಳಿಗೆ ಯಾವುದೇ ದಾಖಲೆ ನೀಡಿರಲಿಲ್ಲ. ಹೀಗಾಗಿ ತಿಲಕ್​ನಗರ ಠಾಣೆ ಪೊಲೀಸರು ಸೌಮ್ಯಾರೆಡ್ಡಿ ಕಾರು ಚಾಲಕನ ಮೇಲೆ ಎಫ್ ಐಆರ್ ದಾಖಲು ಮಾಡಿದ್ದಾರೆ.

ಮೊಬೈಲ್​ಗಳು, 23 ಸೀರೆಗಳು, 23 ಬ್ಲೌಸ್ ಪೀಸ್, 16 ಶಾಲು, 150 ಪ್ರೋಗ್ರೆಸ್ ರಿಪೋರ್ಟ್ ಇರುವ ಬುಕ್​ಲೆಟ್ಸ್, ಸ್ಯಾಮ್ಸಂಗ್, ನೋಕಿಯಾ ಆ್ಯಂಡ್ರಾಯ್ಡ್ ಮೊಬೈಲ್​ಗಳನ್ನು ಮತದಾರರಿಗೆ ಹಂಚಲು ಕಾರಿನಲ್ಲಿ ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!