ಹರಪನಹಳ್ಳಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನಾಯಕಿ ಗೆಲುವು ಸಾಧಿಸಲಿ ಎಂದು ಅಭಿಮಾನಿಯೊಬ್ಬರು ಕಟ್ಟಿಕೊಂಡಿದ್ದ 2023 ರ ಹರಕೆಯನ್ನು ಶಾಸಕಿ ಲತಾ ಮಲ್ಲಿಕಾರ್ಜುನ್ ಇಂದು ಅಭಿಮಾನಿಗಳ ಜೊತೆ ಅಜೀರಾಕ್ಕೆ ತೆರಳುವ ಮೂಲಕ ಪೂರ್ಣಗೊಳಿಸಿದ್ದಾರೆ.
ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಜಯಸಾಧಿಸಿದರೆ, ಶಾಸಕರಿಂದಲೇ ಚಾರ್ದ ಚಿತ್ತಿ ದರ್ಗಾಕ್ಕೆ ಚಾದರ್ ಸಲ್ಲಿಸುವ ಹರಕೆಯನ್ನು ಅಭಿಮಾನಿಯೊಬ್ಬರು ಕಟ್ಟಿಕೊಂಡಿದ್ದರು.
ಆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲತಾ ಅವರು ಗೆಲುವು ಸಾಧಿಸಿದ್ದರು. ಹೀಗಾಗಿ ಇಂದು (ಡಿ.2) ಅಭಿಮಾನಿಯ ಜೊತೆಗೆ ದರ್ಗಾಗೆ ಭೇಟಿ ನೀಡಿ ಅಭಿಮಾನಿಯ ಆಸೆಯ ಜೊತೆಗೆ ಹರಕೆಯನ್ನೂ ಈಡೇರಿಸಿದ್ದಾರೆ.