Sunday, July 19, 2026
Homeಟಾಪ್ ನ್ಯೂಸ್CONGRESS: ‘ಸರ್, ಪ್ಲೀಸ್ ದೆಹಲಿಯಲ್ಲಿ ಏನೇನಾಯ್ತು ಹೇಳಿ’.. ಸಿದ್ದು ಗುಡುಗಿದ ಬೆನ್ನಲ್ಲೇ ಖರ್ಗೆ ಬಳಿ ಸಚಿವರ...

CONGRESS: ‘ಸರ್, ಪ್ಲೀಸ್ ದೆಹಲಿಯಲ್ಲಿ ಏನೇನಾಯ್ತು ಹೇಳಿ’.. ಸಿದ್ದು ಗುಡುಗಿದ ಬೆನ್ನಲ್ಲೇ ಖರ್ಗೆ ಬಳಿ ಸಚಿವರ ಪಟ್ಟು

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದಿದ್ದಾರೆ. ಟಗರು ಗುಟುರು ಬೆನ್ನಲ್ಲೇ ಸಿದ್ದು ಆಪ್ತೇಷ್ಟರು ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಖರ್ಗೆ ನಿವಾಸಕ್ಕೆ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಮಹದೇವಪ್ಪ, ಸತೀಶ್ ಜಾರಕಿಹೊಳಿ ಹೋಗಿದ್ರು. ಗೃಹ ಸಚಿವ ಜಿ ಪರಮೇಶ್ವರ್​ರನ್ನೂ ಕರೆಸಿಕೊಂಡಿದ್ರು. ಎಲ್ಲರೂ ಸೇರಿ ‘ಸರ್, ಡೆಲ್ಲಿಯಲ್ಲಿ ಏನಾಗಿದೆ? ದಯವಿಟ್ಟು ಹೇಳಿ’ ಎಂದು ಮಲ್ಲಿಕಾರ್ಜುನ ಖರ್ಗೆಗೆ ದುಂಬಾಲು ಬಿದ್ದಿದ್ದಾರೆ.

ಜಪ್ಪಯ್ಯ ಅಂದ್ರೂ ಬಾಯಿ ಬಿಡದ ಖರ್ಗೆ..!
ಸಿದ್ದರಾಮಯ್ಯ ಆಪ್ತ ಸಚಿವರು ಏನೇ ಸರ್ಕಸ್ ಮಾಡಿದರೂ, ಎಷ್ಟೇ ಕೇಳಿದರೂ ಖರ್ಗೆ ಮಾತ್ರ ಬಾಯಿ ಬಿಡಲಿಲ್ವಂತೆ. ಇಬ್ಬರ ಮಧ್ಯೆ ನಡೆದ ಚರ್ಚೆ ಬಗ್ಗೆ ಏನೂ ಹೇಳಲ್ಲ ಎಂದು ಹೇಳಿ ಕಳಿಸಿದ್ದಾರಂತೆ.

ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಸಚಿವರು ಮೌನರಾಗಿದ್ದು, ಸಹಜ ಭೇಟಿ ಅಂತ ಹೇಳಿ‌ ಬಹುತೇಕ ಸಚಿವರು ಹೊರಟು ಹೋಗಿದ್ದಾರೆ. ನಾಯಕತ್ವದ ಬಗ್ಗೆ ಯಾವುದೇ ಹೇಳಿಕೆ‌ ‌ನೀಡದಂತೆ ಖರ್ಗೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ. ಖರ್ಗೆ ಭೇಟಿಗೆ ಬಂದಿದ್ದವರು ಬಹುತೇಕ ಸಿಎಂ ಆಪ್ತ ಸಚಿವರೇ ಆಗಿರುವುದು ವಿಶೇಷ.

ಪ್ರತ್ಯೇಕ ಸಭೆ ನಡೆಸಿದ ದಲಿತ ಸಚಿವರು..
ಇದಾದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಹೆಚ್.ಸಿ ಮಹಾದೇವಪ್ಪ ರಹಸ್ಯ ಸಮಾಲೋಚನೆ ನಡೆಸಿದ್ದಾರೆ. ಶಿವಾನಂದ ವೃತ್ತದಲ್ಲಿರುವ ಸಚಿವ ಹೆಚ್‌.ಸಿ ಮಹಾದೇವಪ್ಪ ನಿವಾಸದಲ್ಲಿ ಪರಸ್ಪರ ಚರ್ಚೆ ನಡೆಸಿದ್ದಾರೆ. ಸಚಿವ ಮಹಾದೇವಪ್ಪ ನಿವಾಸಕ್ಕೆ ತೆರಳಿ ಸುಮಾರು 25 ನಿಮಿಷಗಳ ಕಾಲ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಇದಾದ ಬಳಿಕ ಉಭಯ ನಾಯಕರು ಒಂದೇ ಕಾರಿನಲ್ಲಿ ತೆರಳಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!