Monday, August 17, 2026
Homeಟಾಪ್ ನ್ಯೂಸ್MADIKERI: ವಸತಿ ಸಚಿವರ ಪಿಎಸ್‌ನಿಂದಲೇ ಅಕ್ರಮ ರೆಸಾರ್ಟ್‌ ನಿರ್ಮಾಣ- ಭಾರೀ ಆಕ್ರೋಶ

MADIKERI: ವಸತಿ ಸಚಿವರ ಪಿಎಸ್‌ನಿಂದಲೇ ಅಕ್ರಮ ರೆಸಾರ್ಟ್‌ ನಿರ್ಮಾಣ- ಭಾರೀ ಆಕ್ರೋಶ

ಮಡಿಕೇರಿ: ವಸತಿ ಸಚಿವರ ವೈಯಕ್ತಿಕ ಕಾರ್ಯದರ್ಶಿ (PS) ಸರ್ಫರಾಜ್‌ ಖಾನ್‌ (Sarfaraz Khan) ಅವರು ನಿರ್ಮಿಸಿರುವ ಐಷಾರಾಮಿ ರೆಸಾರ್ಟ್‌ಗೆ (Resort) ಯಾವುದೇ ಇಲಾಖೆಯ ಅನುಮತಿ (Permission) ಪಡೆದಿಲ್ಲ ಅನ್ನೋ ಆರೋಪವೊಂದು ಕೇಳಿಬಂದಿದೆ.

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ವಣಚಲಿನಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ. ಅರಣ್ಯಪ್ರದೇಶದಲ್ಲಿ ರೆಸಾರ್ಟ್‌ ನಿರ್ಮಾಣ ಮಾಡಬೇಕಿದ್ದರೆ, ಭೂಮಿಯನ್ನ ಮೊದಲು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಬೇಕು. ಅದಕ್ಕೂ ಮುನ್ನ ಪಂಚಾಯ್ತಿ, ಅರಣ್ಯ, ಪರಿಸರ ಮಾಲಿನ್ಯ ಹಾಗೂ ಕಂದಾಯ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಭೂ ಪರಿವರ್ತನೆಯೇ ಮಾಡದೇ, ಯಾವುದೇ ಇಲಾಖೆಗಳ ಅನುಮತಿಯನ್ನೂ ಪಡೆಯದೇ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೊಡಗಿನ ಜನರು ಸರ್ಫರಾಜ್ ಖಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತಹಶೀಲ್ದಾರ್‌ ಹೇಳಿದ್ದೇನು?: ಇನ್ನು ರೆಸಾರ್ಟ್ ಅಕ್ರಮ ನಿರ್ಮಾಣದ ಬಗ್ಗೆ ಮಡಿಕೇರಿ ತಹಶಿಲ್ದಾರ್ ಪ್ರತಿಕ್ರಿಯಿಸಿ, ಸರ್ಫರಾಜ್ ಖಾನ್ ಅವರು ಫಾರ್ಮ್ ಹೌಸ್‌ಗೆಂದು ಅನುಮತಿ ಪಡೆದಿದ್ದಾರೆ. 2023ರ ಡಿಸೆಂಬರ್ 12 ರಂದು ಅನುಮತಿ ನೀಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡುವಂತೆ ಕೋರ್ಟ್‌ ಆದೇಶ- ಯಾಕೆ..?

ಫಾರ್ಮ್‌ಹೌಸ್‌ ನಿರ್ಮಿಸಬೇಕಾದರೂ ಕೆಲವು ನಿಯಮಗಳಿವೆ. ತಮ್ಮ ಹೆಸರಿನಲ್ಲಿರುವ ಒಟ್ಟು ಭೂಮಿಯಲ್ಲಿ 10% ಮಾತ್ರವೇ ಫಾರ್ಮ್ ಹೌಸ್ ನಿರ್ಮಿಸಲು ಬಳಸಬಹುದು. ಆದರೆ ಇವರು ಆ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಜೊತೆಗೆ ಅದರ ಮುಂಭಾಗದಲ್ಲಿಯೇ ಬೃಹತ್ ಪ್ರಮಾಣದ ಈಜುಕೊಳ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯಲ್ಲಿ ಇರುವಂತೆ ಇದು ಪರಿಸರ ಸೂಕ್ಷ್ಮ ವಲಯ ಪುಷ್ಪಗಿರಿ ವನ್ಯಧಾಮ ಪರಿಸರ ಸೂಕ್ಷ್ಮ ವಲಯವಾಗಿದೆ.

ಇದು ಗೊತ್ತಾದ ಬಳಿಕ 2025 ರ ಮೇ 8 ರಂದು ಮೊದಲು ಗ್ರಾಮ ಆಡಳಿತಾಧಿಕಾರಿಯಿಂದ ಸ್ಥಳ ಪರಿಶೀಲನೆ ಮಾಡಿಸಿದೇವೆ. ಸ್ಥಳ ಪರಿಶೀಲಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ರು. ಈ ವರದಿ ಆಧಾರದಲ್ಲಿ 2025 ರ ನವೆಂಬರ್ 26 ರಂದು ಸರ್ಫರಾಜ್ ಖಾನ್ ಅವರಿಗೆ ನೋಟಿಸ್ ನೀಡಲು ಮುಂದಾಗಿದೆವು. ಆದರೆ ಸ್ಥಳದಲ್ಲಿ ಸರ್ಫರಾಜ್ ಇಲ್ಲದ ಹಿನ್ನಲೆ ನೊಟೀಸ್ ಚುಟುಕಾಸಿ ಬರಲಾಗಿತ್ತು. ಹೀಗೆ ಚುಟುಕಾಸಿದ ನಂತರ 10 ದಿನಗಳಲ್ಲಿ ಸರ್ಫರಾಜ್ ಖಾನ್ ಅವರು ಉತ್ತರಿಸಬೇಕಾಗಿತ್ತು.

ಚುಟುಕಾಸಿ ಒಂದು ತಿಂಗಳ ಮೇಲೆ 12 ದಿನಗಳಾಗಿದ್ದರೂ ಇಂದಿಗೂ ಉತ್ತರಿಸಿಲ್ಲ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಮತ್ತೊಂದು ನೋಟಿಸ್ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ರು.

ಹೆಚ್ಚಿನ ಸುದ್ದಿ

Change Language »
error: Content is protected !!