Sunday, November 3, 2024
Homeಬೆಂಗಳೂರುನಾನು ಕಾಂಗ್ರೆಸ್‌ಗೆ ಹೋಗ್ತೀನಿ ಅಂದವರಿಗೆಲ್ಲಾ ಒಳ್ಳೆಯದಾಗಲಿ - ಸಚಿವ ಸೋಮಣ್ಣ

ನಾನು ಕಾಂಗ್ರೆಸ್‌ಗೆ ಹೋಗ್ತೀನಿ ಅಂದವರಿಗೆಲ್ಲಾ ಒಳ್ಳೆಯದಾಗಲಿ – ಸಚಿವ ಸೋಮಣ್ಣ

ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ವಸತಿ ಸಚಿವ ಸೋಮಣ್ಣ ಕಾಂಗ್ರೆಸ್ ಪಕ್ಷಾಂತರ ಗುಸುಗುಸು ಇನ್ನಷ್ಟು ದಟ್ಟವಾಗುತ್ತಿದೆ. ಗೋವಿಂದ ರಾಜ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಈ ಬಾರಿ ಸೋಮಣ್ಣ ಅವರಿಗೆ ಸಿಗುವುದು ಸಂಶಯ ಎಂಬ ವಿಷಯ ಹರಿದಾಡುತ್ತಿದ್ದಂತೆಯೇ ಸೋಮಣ್ಣ ಕಾಂಗ್ರೆಸ್ ಕಡೆ ಕಣ್ಣು ಹಾಯಿಸುತ್ತಿದ್ದಾರೆ ಎಂಬ ವದಂತಿ ದಿನಂದಿಂದ ದಿನಕ್ಕೆ ಪುಷ್ಟಿ ಪಡೆದುಕೊಳ್ಳುತ್ತಿದೆ.

ಸೋಮವಾರ ವಿಧಾನ ಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿ. ಸೋಮಣ್ಣ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಸೋಮಣ್ಣನವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಗೆ `ಅವರಿಗೆಲ್ಲ ಒಳ್ಳೆಯದಾಗಲಿ’ ಎಂದು ಜಾರಿಕೊಂಡಿದ್ದಾರೆ.

ಅವರಿಗೆಲ್ಲಾ ಒಳ್ಳೆಯದಾಗಲಿ ಎಂದರೆ ಹೇಳಿದವರ ಬಾಯಿ ಹರಕೆಯಂತೆ ತಾನು ಕಾಂಗ್ರೆಸ್ ಸೇರುವಂತಾಗಲಿ ಎಂದು ಕೂಡಾ ಅರ್ಥೈಸಲಾಗುತ್ತಿದೆ. ಸಮಯ ಬಂದಾಗ ಕಾಂಗ್ರೆಸ್ ಸೇರುವುದೇ ಆದ್ರೆ ಯಾರ ವಿರೋಧವೂ ಬೇಡ ಎಂದು ಈ ರೀತಿ ಪ್ರತಿಕ್ರಿಯಿಸಿದ್ದಾರೇನೋ ಎಂಬ ಚರ್ಚೆಗಳೂ ನಡೆಯುತ್ತಿವೆ.

ಜೊತೆಗೆ ಮಗನಿಗೆ ಟಿಕೆಟ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರೇವಣ್ಣ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಸೂತ್ರ ಎಲ್ಲರಿಗೂ ಅನ್ವಯಿಸಬೇಕು ಎನ್ನುವ ಮೂಲಕ ತಮ್ಮ ರಾಜಕೀಯ ಮುತ್ಸದ್ದಿ ಯಡಿಯೂರಪ್ಪನವರಿಗೂ ಟಾಂಗ್ ನೀಡಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರಾದ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರೂ ಸಹ ಆಪ್ತರು ಎನ್ನುವ ಮೂಲಕ ಬಿಜೆಪಿಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿರುವ ಸಮಯದಲ್ಲಿ ವೀರಶೈವ ಸಮುದಾಯದ ಪ್ರಮುಖ ಮುಖಂಡರೊಲ್ಲಬ್ಬರಾದ ಸೋಮಣ್ಣನವರ ಪಕ್ಷಾಂತರ ಎರಡೂ ಪಕ್ಷಗಳ ಮೇಲೂ ಪ್ರಭಾವ ಬೀರುವುದಂತೂ ಖಚಿತ

ಹೆಚ್ಚಿನ ಸುದ್ದಿ

error: Content is protected !!