Wednesday, December 4, 2024
Homeಟಾಪ್ ನ್ಯೂಸ್Shankar Nag : ಆಟೋ ಚಾಲಕರಿಗೆ "ಶಂಕರ್‌ನಾಗ್‌" ಸ್ಪೂರ್ತಿಯ ಚಿಲುಮೆ- ರಾಮಲಿಂಗಾರೆಡ್ಡಿ

Shankar Nag : ಆಟೋ ಚಾಲಕರಿಗೆ “ಶಂಕರ್‌ನಾಗ್‌” ಸ್ಪೂರ್ತಿಯ ಚಿಲುಮೆ- ರಾಮಲಿಂಗಾರೆಡ್ಡಿ

ಬೆಂಗಳೂರು : ಇಂದಿಗೂ ದಿವಂಗತ ಮೇರುನಟ ಶಂಕರ್‌ನಾಗ್‌ ಅವರು ಆಟೋ ಚಾಲಕರಿಗೆ ಅತ್ಯಂತ ಪ್ರಿಯ ಹಾಗೂ ಸ್ಪೂರ್ತಿಯ ಚಿಲುಮೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿದ್ದ ಶಂಕರ್‌ನಾಗ್ ಅವರ ಜನ್ಮದಿನದ ಪ್ರಯುಕ್ತ 11ನೇ ವರ್ಷದ “ಚಾಲಕರ ದಿನ” ವನ್ನು ಉದ್ಘಾಟಿಸಿ ಮಾತನಾಡಿ ಅವರು, ಬೆಂಗಳೂರಿನಲ್ಲೇ 3 ಲಕ್ಷಕ್ಕೂ ಅಧಿಕ ಆಟೋ ಸಂಚರಿಸುತ್ತಿದ್ದು, ಆಟೋ ಚಾಲಕರಿಲ್ಲದೇ ಬೆಂಗಳೂರು ಇಲ್ಲ ಎಂದರು.

ಪೀಸ್‌ಆಟೋ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘದಿಂದ ಶಂಕರ್‌ನಾಗ್‌ ಅವರ ಜನ್ಮದಿನವನ್ನು “ಚಾಲಕರ ದಿನ”ವನ್ನಾಗಿ ಸರ್ಕಾರ ಅಧಿಕೃತವಾಗಿ ಆಚರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪೀಸ್ ಆಟೋ ಸಂಘಟನೆ ವತಿಯಿಂದ 300 ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಿದ್ದು, ಈ ಮಹಿಳೆಯರು ಸ್ವತಃ ಆಟೋ ಖರೀದಿಗೆ ಹಣಕಾಸಿನ ನೆರವು ಸಹ ಇದೇ ವೇಳೆ ನೀಡಲಾಯಿತು.

ಹೆಚ್ಚಿನ ಸುದ್ದಿ

error: Content is protected !!