ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ಅವರು ನಟ ದರ್ಶನ್ (Actor Darshan) ಅವರನ್ನ ಭೇಟಿ ಮಾಡಿದ್ದಾರಾ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸೆಲೆಬ್ರಿಟಿಗಳ ಇಂಚಾರ್ಜ್ ಅಲ್ಲ
ಪರಪ್ಪನ ಅಗ್ರಹಾರ ಭೇಟಿಯ ನಂತರ ಮಾಧ್ಯಮಗಳು ಅವರಿಗೆ ನೀವು ದರ್ಶನ್ ಅವರನ್ನ ಭೇಟಿ ಮಾಡಿದ್ದೀರಿ ಎಂದು ಕೇಳಿದಾಗ, ನೋ ನೋ ನಾನು ಸೆಲೆಬ್ರಿಟಿಗಳ ಇಂಚಾರ್ಜ್ ಅಲ್ಲ. ನಾನು ಸಂಪೂರ್ಣ ಇಲಾಖೆಯ ಸಚಿವ. ಇಲ್ಲಿಗೆ ಭೇಟಿ ನೀಡಿರುವುದು ಜೈಲಿನ ವ್ಯವಸ್ಥೆ ಹೇಗಿದೆ ಎಂಬುದನ್ನ ನೋಡಲು ಅಷ್ಟೇ, ಯಾರನ್ನೂ ಭೇಟಿ ಮಾಡಿಲ ಎಂದಿದ್ದಾರೆ.
ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ, ಅರ್ಜಿ ವಜಾ!
ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ಹಾಗೂ ಆರೋಪಿ ದರ್ಶನ್ ತೂಗುದೀಪ್ಗೆ (Actor Darshan) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಮತ್ತೊಮ್ಮೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅವರ ಪ್ರಮುಖ ಅರ್ಜಿಯೊಂದು ವಿಚಾರಣೆಯ ಹಂತ ತಲುಪುವ ಮುನ್ನವೇ (Breaking) ವಜಾಗೊಂಡಿದೆ.
ತಮ್ಮ ವಿರುದ್ಧದ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಈ ಅರ್ಜಿಯು ನ್ಯಾಯಮೂರ್ತಿಗಳ ಪೀಠದ ಮುಂದೆ ಬಂದು ವಿಚಾರಣೆಗೆ ಒಳಗಾಗುವ ಮುನ್ನವೇ ಪ್ರಾಥಮಿಕ ಪರಿಶೀಲನಾ ಹಂತದಲ್ಲೇ ತಿರಸ್ಕೃತಗೊಂಡಿದೆ.
ಒಂದು ವರ್ಷದ ಜೈಲು ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಕೋರಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಆದರೆ ಅರ್ಜಿಯ ತಾಂತ್ರಿಕತೆ ಮತ್ತು ಕಾನೂನು ಅಂಶಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರು ಜು.3ರಂದು ಈ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ರೇಣುಕಾಸ್ವಾಮಿಯ ಭೀಕರ ಹತ್ಯೆ ಪ್ರಕರಣದ ಟ್ರಯಲ್ ನಡೆಯುತ್ತಿರುವ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನಲ್ಲಿ ಸಿಗಬಹುದು ಎನ್ನಲಾಗಿದ್ದ ಕಾನೂನು ಪರಿಹಾರದ ಹಾದಿ ಸದ್ಯಕ್ಕೆ ದರ್ಶನ್ ಅವರಿಗೆ ಮುಚ್ಚಿದಂತಾಗಿದೆ. ರಿಜಿಸ್ಟ್ರಾರ್ ಮಟ್ಟದಲ್ಲೇ ಅರ್ಜಿ ವಜಾಗೊಂಡಿರುವುದು ದರ್ಶನ್‌ಗೆ ಆಘಾತವಾಗಿದೆ.
ಬೇಲ್ ಕೊಡಿ ಸ್ವಾಮಿ ಎಂದು ಬೇಡಿಕೊಂಡಿದ್ದ ದಾಸ!
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಎದುರಾಗಿರುವ ವಿಚಾರಣೆಯ ವಿಳಂಬ ಗತಿಯನ್ನು ಪ್ರಸ್ತಾಪಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ದರ್ಶನ್ ಕಳೆದ ಜೂ.29ರಂದು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಒಂದು ವರ್ಷದವರೆಗೂ ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನ್ಯಾಯಾಲಯ ನೀಡಿರುವ ನಿರ್ಬಂಧದ ಆದೇಶವನ್ನು ಮಾರ್ಪಡಿಸಬೇಕು ಎಂದು ದಾಸ ಸುಪ್ರೀಂ ಕೋರ್ಟ್‌ಗೆ ವಿಶೇಷ ಮನವಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಇದನ್ನೂ ಓದಿ: ಕರಾವಳಿ ತೀರದಲ್ಲಿ ಕುಳಿತ ರಾಧಿಕಾ ಪಂಡಿತ್, ವೈರಲ್ ಆಯ್ತು ಪೋಸ್ಟ್!