ಬೆಂಗಳೂರು: ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಮೂವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಬೇರೆ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ವಲಸೆ ಬಂದವರಿಗೆ ಕಾಂಗ್ರೆಸ್ ಮಣೆ ಹಾಕಿದೆ.
ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿ, ಇದೀಗ ಮರಳಿ ಕಾಂಗ್ರೆಸ್ ಸೇರಿರುವ ಬಾಬುರಾವ್ ಚಿಂಚನಸೂರ್, ಜೆಡಿಎಸ್ ತೊರೆದು ಬಂದ ಗುಬ್ಬಿ ಶ್ರೀನಿವಾಸ್, ಹಾಗೂ ಬಿಜೆಪಿಯಿಂದ ಬಂದ ಎನ್.ವೈ ಗೋಪಾಲಕೃಷ್ಣರವರಿಗೆ ಟಿಕೆಟ್ ಲಭಿಸಿದೆ.
ಬಾಭುರಾವ್ ಚಿಂಚನಸೂರ್‌ಗೆ ಗುರುಮಿಠಕಲ್‌ನಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದ್ರೆ, ಶ್ರೀನಿವಾಸ್ ತುಮಕೂರಿನ ಗುಬ್ಬಿಯಿಂದಲೇ ಕಣಕ್ಕಿಳಿಯಲಿದ್ದಾರೆ. ಇನ್ನು ಎನ್.ವೈ ಗೋಪಾಲಕೃಷ್ಣ ಮೊಳಕಾಲ್ಮೂರು ಕ್ಷೇತ್ರದಿಂದ ಸ್ರ್ಧೆ ಮಾಡಲಿದ್ದಾರೆ.