ಹೊಸದಿಲ್ಲಿ: ಪ್ರಸಿದ್ಧ ಎನ್ ಜಿಒ ಆಕ್ಸ್‌ಫ್ಯಾಮ್ ಇಂಡಿಯಾದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ನೋಂದಣಿಯನ್ನು ನವೀಕರಣ ಅರ್ಜಿಯನ್ನು ತಿರಸ್ಕರಿಸಿದ ಎರಡು ವರ್ಷಗಳ ನಂತರ, ಕೇಂದ್ರ ಗೃಹ ಸಚಿವಾಲಯ ಗುರುವಾರ ಆಕ್ಸ್ ಫ್ಯಾಮ್ ನಿಂದ ನಿಯಮಗಳ ಉಲ್ಲಂಘನೆಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
ಸಾಮಾಜಿಕ ಚಟುವಟಿಕೆಗಳನ್ನು ಆಕ್ಸ್‌ಫ್ಯಾಮ್ ಇಂಡಿಯಾ ನೋಂದಣಿಯಾಗಿತ್ತು. 2021ರ ಡಿಸೆಂಬರ್ 31ರವರೆಗೆ ಇದರ ನೋಂದಣಿ ವಾಯಿದೆ ಕೊನೆಯಾಗಿತ್ತು. ಆದರೆ ಈ ಸಮಯದಲ್ಲಿ ಆಕ್ಸ್ ಫ್ಯಾಮ್ ನಿಂದ ಸಾಕಷ್ಟು ನಿಯಮಗಳ ಉಲ್ಲಂಘನೆ ನಡೆದಿದೆ. ಹೀಗಾಗಿ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.
ವಿದೇಶಿ ಕೊಡುಗೆ ಕಾಯ್ದೆಯ ನಿಯಮಗಳನ್ನು ಆಕ್ಸ್ ಫ್ಯಾಮ್ ಉಲ್ಲಂಘಿಸಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಕಾಯ್ದೆಯು ಯಾವುದೇ ಹಣಕಾಸಿನ ವರ್ಗಾವಣೆಯನ್ನು ನಿಷೇಧಿಸುತ್ತದೆ. ಆದರೆ ಈ ಕಾಯ್ದೆ ಜಾರಿಗೆ ಬಂದ ನಂತರವೂ ಆಕ್ಸ್‌ಫ್ಯಾಮ್ ಇಂಡಿಯಾ ವಿದೇಶಿ ಹಣವನ್ನು ವಿವಿಧ ಘಟಕಗಳಿಗೆ ವರ್ಗಾಯಿಸಿತ್ತು ಎನ್ನುವ ಆರೋಪಗಳಿವೆ.