Saturday, January 25, 2025
Homeಬೆಂಗಳೂರುವೈಟ್‌ಫೀಲ್ಡ್ - ಕೆಆರ್ ಪುರ ಮೆಟ್ರೋ ಸಂಚಾರಕ್ಕೆ ಮಾರ್ಚ್ ಮಾಸಾಂತ್ಯದೊಳಗೆ ಚಾಲನೆ

ವೈಟ್‌ಫೀಲ್ಡ್ – ಕೆಆರ್ ಪುರ ಮೆಟ್ರೋ ಸಂಚಾರಕ್ಕೆ ಮಾರ್ಚ್ ಮಾಸಾಂತ್ಯದೊಳಗೆ ಚಾಲನೆ

ಬೆಂಗಳೂರಿನಲ್ಲಿ ಅತಿ ವೇಗದ ಸಾರಿಗೆ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ಮೆಟ್ರೋ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಪರ್ಪಲ್ ಲೈನ್ ಎರಡನೇ ಹಂತದ ಕಾಮಗಾರಿಯ ಅಂಗವಾಗಿರುವ ವೈಟ್ ಫೀಲ್ಡ್- ಕೆಆರ್ ಪುರ ನಡುವಿನ 12.75 ಕಿಮೀ ಮಾರ್ಗವು ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆಗೊಳ್ಳುವ ಸಾಧ್ಯತೆಗಳಿವೆ.

ಮಾ. 25 ರಂದು ಉದ್ಘಾಟನೆ ನಡೆಯುವ ನಿರೀಕ್ಷೆಯಿದ್ದರೂ ಇದುವರೆಗೂ ಖಚಿತವಾಗಿ ದಿನಾಂಕ‌ ನಿರ್ಧರಿಸಿಲ್ಲ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ.

ವೈಟ್ ಫೀಲ್ಡ್ – ಕೆ ಆರ್ ಪುರ ಮಾರ್ಗದ ಮೆಟ್ರೋ ಸಂಚಾರ ಪ್ರಾರಂಭವಾದರೆ ಬೆಂಗಳೂರಿನ ಹೊರವರ್ತುಲ‌ ರಸ್ತೆಯಲ್ಲಿ ವಾಹನದಟ್ಟಣೆಗೆ ಕಡಿವಾಣ ಬೀಳುವ ಸಾಧ್ಯತೆಯಿದೆ.

2024 ರ ವೇಳೆಗೆ ಮೆಟ್ರೋ ಎರಡನೇ ಹಂತದ ಕಾಮಗಾರಿ‌ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ

ಹೆಚ್ಚಿನ ಸುದ್ದಿ

error: Content is protected !!