ನೆಲಮಂಗಲ: ಹಾಸಿಗೆ ಗೋದಾಮಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಹಾಸಿಗೆಗಳು ಸುಟ್ಟು ಭಸ್ಮವಾಗಿರುವ ಘಟನೆ ಶನಿವಾರ ಮುಂಜಾನೆ ನೆಲಮಂಗಲದ ಟಿ.ಬೇಗೂರು ಬಳಿಯಲ್ಲಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಾಕಷ್ಟು ವಸ್ತುಗಳು ಸುಟ್ಟು ಕರಕಲಾಗಿವೆ.
ಬಾಲಕೃಷ್ಣ ಎಂಬುವವರಿಗೆ ಸೇರಿದ ಈ ಗೋದಾಮನ್ನು ಹಾಸಿಗೆ ಕಂಪನಿಯೊಂದು ಬಾಡಿಗೆಗೆ ಪಡೆದಿತ್ತು. ವಿದ್ಯುತ್ ಕಂಬದಿಂದ ತಂತಿ ಕಡಿದು ಬಿದ್ದಿದ್ದು, ಅದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ. ನೆಲಮಂಗಲ ಪೊಲೀಸರೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.