ಇರಾನ್ : ಮಧ್ಯಪ್ರಾಚ್ಯದಲ್ಲಿ (Middle east) ಉದ್ಭವಿಸಿರುವ ಸಂಘರ್ಷ ತೀವ್ರ ತಿರುವು ಪಡೆದುಕೊಂಡಿದೆ. ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ (Iran) ಮೇಲೆ ನಡೆಸಿದ ವಾಯುದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖಮೇನಿ (Ayatollah Ali Khamenei) ಹಾಗೂ ಅವರ ಕುಟುಂಬದ ಅನೇಕ ಸದಸ್ಯರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಅಮೆಜಾನ್ ಡೇಟಾ ಕೇಂದ್ರಗಳ ಮೇಲೆ ಇರಾನ್ ಡ್ರೋನ್ ದಾಳಿ- VIDEO
ಇಸ್ರೇಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 200 ಯುದ್ಧವಿಮಾನಗಳು 500ಕ್ಕೂ ಅಧಿಕ ಗುರಿಗಳನ್ನು ಧ್ವಂಸಗೊಳಿಸಿವೆ. ರಾಯಿಟರ್ಸ್ ವರದಿ ಪ್ರಕಾರ, 86 ವರ್ಷದ ಖಮೇನಿ ಜೊತೆಗೆ ಅವರ ಪುತ್ರಿ, ಮೊಮ್ಮಗಳು ಹಾಗೂ ಇನ್ನಿತರ ಸಂಬಂಧಿಕರೂ ಪ್ರಾಣ ಕಳೆದುಕೊಂಡಿದ್ದಾರೆ. 14 ತಿಂಗಳ ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ ಕೂಡ ಈ ಯುದ್ಧದಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಮೇನಿ ಸಾವನ್ನು ದೃಢಪಡಿಸಿ, ಇದನ್ನು ನ್ಯಾಯದ ಸಾಧನೆ ಎಂದು ಹೇಳಿದ್ದರು. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಮೇನಿಯ ಅಡಗುತಾಣ ಸಂಪೂರ್ಣ ನಾಶವಾಗಿದೆ ಎಂದು ತಿಳಿಸಿದ್ದರು.