Friday, December 5, 2025
Homeಟಾಪ್ ನ್ಯೂಸ್OPERATION SINDOOR: ದೇಶದಲ್ಲಿ ಬಾಲಬಿಚ್ಚಿದ ಪಾಕ್‌ ಪ್ರೇಮಿಗಳು- ಮಂಗಳೂರು ವಿದ್ಯಾರ್ಥಿನಿಯಿಂದ ವಿವಾದಾತ್ಮಕ ಪೋಸ್ಟ್..!

OPERATION SINDOOR: ದೇಶದಲ್ಲಿ ಬಾಲಬಿಚ್ಚಿದ ಪಾಕ್‌ ಪ್ರೇಮಿಗಳು- ಮಂಗಳೂರು ವಿದ್ಯಾರ್ಥಿನಿಯಿಂದ ವಿವಾದಾತ್ಮಕ ಪೋಸ್ಟ್..!

ಮಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಿದ್ದು, ಈ ನಡುವೆ ದೇಶದಲ್ಲಿರುವ ಕೆಲ ಪಾಕ್‌ ಪ್ರೇಮಿಗಳು ಬಾಲಬಿಚ್ಚಿದ್ದಾರೆ. ವಿಜಯಪುರದ ಬೆನ್ನಲ್ಲೇ ಮಂಗಳೂರಲ್ಲೂ ವಿದ್ಯಾರ್ಥಿನಿಯೊಬ್ಬಳು ಪಾಕ್‌ ಪ್ರೇಮ ಮೆರೆದಿದ್ದಾಳೆ.

ದೇಶ ವಿರೋಧಿ ಪೋಸ್ಟ್‌ ಮಾಡಿದ ವಿದ್ಯಾರ್ಥಿನಿಯನ್ನು ರೇಷ್ಮಾ ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ ಕುರಿತಂತೆ ವಿವಾದಾತ್ಮಕ ಪೋಸ್ಟ್ ಹಾಕಿದ್ದಾಳೆ.

ಪೋಸ್ಟ್‌ನಲ್ಲೇನಿದೆ..?: ರೇಷ್ಮಾ ತನ್ನ ಇನ್‌ಸ್ಟಾ ಪೇಜಿನಲ್ಲಿ, ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ. ಅಲ್ಲಿ ನಂದಿ ಹೋಯಿತು ಬೆಳಕು. ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ.. ಬೆಳಕಿನ ವಿಜೃಂಭಣೆಗಾಗಿ ಹೋರಾಟ.. ಜಯಸಿದ್ದು ಕತ್ತಲು, ಎಲ್ಲೆಲ್ಲೂ ಕತ್ತಲು ಎಂಬುದಾಗಿ ಬರೆದುಕೊಂಡಿದ್ದಾಳೆ. ಕೊನೆಗೆ #dikkaraoperationsindurua ಎಂಬುದಾಗಿ ಹ್ಯಾಷ್ ಟ್ಯಾಗ್ ಹಾಕುವ ಮೂಲಕ ಪಾಪಿ ಪಾಕಿಸ್ತಾನದ ಮೇಲೆ ಭಾರೀ ಪ್ರೀತಿ ತೋರಿ ಪೇಚಿಗೆ ಸಿಲುಕಿದ್ದಾಳೆ.

ಸದ್ಯ ರೇಷ್ಮಾ ಪೋಸ್ಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ದೇಶ ವಿರೋಧಿ ಪೋಸ್ಟ್ ಹಾಕಿರುವ ರೇಷ್ಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ತೀವ್ರ ಆಕ್ರೋಶದ ಬೆನ್ನಲ್ಲೇ ರೇಷ್ಮಾ ಎನ್ ಬಾರಿಗಾ ತನ್ನ ಇನ್ ಸ್ಟಾ ಪೋಸ್ಟ್ ಅನ್ನೇ ಡಿಲೀಟ್ ಮಾಡಿದ್ದಾಳೆ.

IND-PAK WAR: ಮುಗ್ದ ಪಾಕಿಸ್ತಾನಿಗಳನ್ನು ಅಲ್ಲಾಹು ಭಾರತದಿಂದ ರಕ್ಷಿಸಲಿ – ವಿಜಯಪುರದ ವಿದ್ಯಾರ್ಥಿನಿ ಪೋಸ್ಟ್‌!

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!